Advertisement
ಜೋಳ ಬಿತ್ತನೆ ಆಗುತ್ತಿದ್ದ ಪ್ರದೇಶದಲ್ಲಿ ಸೋಯಾಬಿನ್ ಆಕ್ರಮಿಸಿಕೊಂಡಿದೆ. ಒಂದೂವರೆ ದಶಕದ ಹಿಂದೆ ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈಗ ಶೇ. 20ರಷ್ಟು ಮಾತ್ರ ಬಿತ್ತನೆ ಆಗುತ್ತಿದೆ. ಒಂದೆಡೆ ಊಟಕ್ಕೆ ಜೋಳದ ರೊಟ್ಟಿ ಬಳಸುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಜೋಳದ ಪ್ರದೇಶ ಕಡಿಮೆಯಾಗಿ ರೊಟ್ಟಿ ತುಟ್ಟಿಯಾಗುತ್ತಿದೆ.
Related Articles
Advertisement
ಜಿಲ್ಲೆಯಲ್ಲಿ 2005-06ರಲ್ಲಿ ಸುಮಾರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಜೋಳ ಕಳೆದ 15 ವರ್ಷಗಳಲ್ಲಿ ಭಾರಿ ಕುಸಿತ ಕಂಡಿದೆ. 2011-12ರಲ್ಲಿ 57 ಸಾವಿರ ಹೆ., 2012-13ರಲ್ಲಿ 55 ಸಾವಿರ ಹೆ., 2013-14ರಲ್ಲಿ 35 ಸಾವಿರ ಹೆ., 2014-15ರಲ್ಲಿ 27 ಸಾವಿರ ಹೆ., 2015-16ರಲ್ಲಿ 22 ಸಾವಿರ ಹೆ., 2016-17ರಲ್ಲಿ 26 ಸಾವಿರ ಹೆ., 2017-18ರಲ್ಲಿ 23 ಸಾವಿರ ಹೆ., 2018-19ರಲ್ಲಿ 21 ಸಾವಿರ ಹೆ., 2019-20ರಲ್ಲಿ 18 ಸಾವಿರ ಹೆ. ಪ್ರದೇಶಕ್ಕೆ ಇಳಿಕೆಯಾಗಿದೆ. ಇನ್ನೂ ಈ ವರ್ಷ 2020-21ರಲ್ಲಿ 13 ಸಾವಿರ ಹೆ. ಗುರಿ ಇದ್ದು, ಈವರೆಗೆ ಕೇವಲ 4745 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೊಂದೆಡೆ 2005-06ರಲ್ಲಿ ಕೇವಲ 32 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಸೋಯಾ ಈಗ 15 ವರ್ಷದಲ್ಲಿ ಸುಮಾರು 1.82 ಲಕ್ಷ ಹೆ. ಪ್ರದೇಶವನ್ನು ಆವರಿಸಿಕೊಂಡಿದೆ. ಅಂದಾಜು 20 ವರ್ಷಗಳ ಹಿಂದೆ ಜಿಲ್ಲೆಗೆ ಪರಿಚಯವಾದ ಸೋಯಾ ಸಧ್ಯ ರಾಜ್ಯದಲ್ಲೇ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಈ ಬೆಳೆಯ ಬೆಳವಣಿಗೆ ಜೋಳ ಮುಗ್ಗರಿಸುವಂತೆ ಮಾಡಿದೆ.
ಜೋಳ ಬಿತ್ತನೆಗೆ ಸರಕಾರ ಪ್ರೋತ್ಸಾಹಿಸಲಿಮಾರುಕಟ್ಟೆಯಲ್ಲಿ ದರ ಕಡಿಮೆ ಜತೆಗೆ ಪ್ರಾಕೃತಿಕ ಹೊಡೆತ ಮತ್ತು ಕೂಲಿಕಾರರ ಸಮಸ್ಯೆ ಜೋಳ ಬಿತ್ತನೆ ಕಡಿಮೆಯಾಗಲು ಪ್ರಮುಖ ಕಾರಣ. ಆದರೆ, ಸೋಯಾಬಿನ್ ಭರವಸೆಯ ಮತ್ತು ಲಾಭದಾಯಕ ಬೆಳೆ ಎನಿಸಿಕೊಂಡಿರುವುದರಿಂದ ರೈತರನ್ನು ಹೆಚ್ಚು ಆಕರ್ಷಿಸಿದೆ. ಜೋಳ ಬಿತ್ತನೆ ಕುಸಿತ ಭವಿಷ್ಯದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜೋಳ ಬಿತ್ತನೆಗಾಗಿ ಸರ್ಕಾರದ ಪ್ರೋತ್ಸಾಹ ಸಿಗಬೇಕಿದೆ.
ಡಾ| ಎನ್.ಎಂ., ಸುನೀಲಕುಮಾರ, ಸಂಯೋಜಕರು ಕೆವಿಕೆ ಬೀದರ ಶಶಿಕಾಂತ ಬಂಬುಳಗೆ