Advertisement
ವಿಯೆಟ್ನಾಂನಲ್ಲಿ ಸ್ಪರ್ಧೆವಿಯೆಟ್ನಾಂನಲ್ಲಿ ‘ಬ್ಯೂಟಿ ವಿತ್ ಹಾರ್ಟ್’ ಸೇರಿದಂತೆ 15 ವಿವಿಧ ಟೈಟಲ್‌ಗಳಿಗಾಗಿ 60 ಮಂದಿ ಸ್ಪರ್ಧಿಗಳ ನಡುವೆ ಸ್ಪರ್ಧೆ ಹಾಗೂ ಆಯ್ಕೆ ನಡೆಯಲಿದೆ. ಮಿಸೆಸ್ ಟಾಲೆಂಟ್ ಟೈಟಲ್‌ಗಾಗಿ ಒಂದು ನಿಮಿಷದ ಸ್ಪರ್ಧೆಯಲ್ಲಿ ನಾನು ದೇವಿಯ ಅವತಾರವನ್ನು ‘ಶಕ್ತಿ’ ಹೆಸರಿನಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದೇನೆ. ಸ್ಪರ್ಧೆಯ ಅಂತಿಮ ಸುತ್ತು ಆ. 5ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಮಂಗಳೂರಿನ ಎಂ. ಸದಾಶಿವ ಹೆಗ್ಡೆ ಹಾಗೂ ನಿಟ್ಟಡೆಗುತ್ತು ಸುಮತಿ ಹೆಗ್ಡೆ ಅವರ ಪುತ್ರಿಯಾಗಿರುವ ಸೌಜನ್ಯ ಹೆಗ್ಡೆ, ಬಾಲ್ಯದಿಂದಲೇ ಸೌಂದರ್ಯ ಸ್ಪರ್ಧೆ, ನೃತ್ಯ ಹಾಗೂ ಯಕ್ಷಗಾನಗಳ ಮೂಲಕ ಗಮನ ಸೆಳೆದವರು. ಕದ್ರಿ ನೃತ್ಯಾಲಯದಲ್ಲಿ ದಿ| ಕೃಷ್ಣರಾವ್ ಹಾಗೂ ಪುತ್ರ ವಿದ್ವಾನ್ ಪ್ರವೀಣ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ದಿ| ಕುಂಬಳೆ ಚಂದ್ರಶೇಖರ ಅವರಿಂದ ಯಕ್ಷಗಾನ ಅಭ್ಯಾಸದ ಜತೆಗೆ ಫಿಲ್ಮ್ ಡ್ಯಾನ್ಸ್, ಫೋಕ್ ಡ್ಯಾನ್ಸ್ ಹಾಗೂ ಫ್ರೀಸ್ಟೈಲ್ ಡ್ಯಾನ್ಸ್‌ಗಳನ್ನೂ ಕಲಿತಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಅನುಭವವನ್ನೂ ಹೊಂದಿದ್ದು, 1999ರಲ್ಲಿ ಮಿಸ್ ಕೋಸ್ಟಲ್, 2000ದಲ್ಲಿ ಪ್ಯಾಟಸಿ, 2001ರಲ್ಲಿ ಜೆಸಿ ಕ್ವೀನ್ ಹಾಗೂ ಕರಾವಳಿ 2002 ಮೊದಲಾದ ಕಿರೀಟಗಳನ್ನು ತನ್ನದಾಗಿಸಿಕೊಂಡಿದ್ದಾರೆ. ‘ಮಾಯಾಜಿಂಕೆ’ ಕನ್ನಡ ಚಲನಚಿತ್ರ ಹಾಗೂ ‘ಬೊಳ್ಳಿಲು’ ತುಳು ಚಿತ್ರದಲ್ಲಿ ನಟಿಸಿದ್ದಾರೆ. ಪತಿ ಸುಧೀರ್ ಹೆಗ್ಡೆ ನೈಜೀರಿಯಾದಲ್ಲಿ ಪೆಪ್ಸಿ ಬಾಟ್ಲಿಗ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಸೌಜನ್ಯಾ ತಂದೆ ಸದಾಶಿವ ಹೆಗ್ಡೆ, ತಾಯಿ ಸುಮತಿ ಹೆಗ್ಡೆ ಉಪಸ್ಥಿತರಿದ್ದರು.