Advertisement

Sowjanya Case: “ಸಾಕ್ಷ್ಯನಾಶ ಪಡಿಸಿದವರನ್ನು ತನಿಖೆಗೆ ಒಳಪಡಿಸಿ’

12:53 AM Aug 30, 2023 | Team Udayavani |

ಉಡುಪಿ: ಘಟನೆ ನಡೆದ ಸಂದರ್ಭದಲ್ಲಿ ಸಾಕ್ಷ್ಯನಾಶ ಮಾಡಿದ ಪೊಲೀಸರು, ವೈದ್ಯರು ಹಾಗೂ ಇತರ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವಂತೆ ಸೌಜನ್ಯಾ ತಾಯಿ ಕುಸುಮಾವತಿ ಆಗ್ರಹಿಸಿದ್ದಾರೆ.

Advertisement

ಸೌಜನ್ಯಾ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಶ್ರೀಕೃಷ್ಣ ಮಠದಲ್ಲಿ ತಪ್ಪಿತ ಸ್ಥರಿಗೆ ಶಿಕ್ಷೆಯಾ ಗಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಹುತಾತ್ಮ ಸ್ಮಾರಕದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಶ್ರೀಕೃಷ್ಣನ ಸನ್ನಿಧಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದ ಅವರು, ಸಾಕ್ಷ್ಯ ನಾಶ ಪಡಿಸಿದವರನ್ನು ಮೊದಲು ತನಿಖೆಗೆ ಒಳಪಡಿಸಬೇಕು. ಆಗ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮರುತನಿಖೆಗೆ ಆಗ್ರಹಿಸಿ ಸೆ. 3 ರಂದು ಬೆಳ್ತಂಗಡಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ. 3 ತಿಂಗಳಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧ ಚಲೋ ಹಮ್ಮಿಕೊಳ್ಳು ವುದಾಗಿ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿದರು.

ಆರೋಪಿಗಳಿಗೆ ಸೂಕ್ತ ಶಿಕ್ಷೆ ಯಾಗುವವರೆಗೆ ಹೋರಾಟ ಮುಂದು ವರಿಯಲಿದೆ. ಆರೋಪಿಗಳಿಗೆ, ಮರ ಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ತನಿಖಾಧಿಕಾರಿ ಎಲ್ಲರಿಗೂ ಸೂಕ್ತ ಶಿಕ್ಷೆಯಾಗಬೇಕು ಎಂದರು.

Advertisement

ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸದೇ ಇರುವುದರ ಬಗ್ಗೆ ನಮಗೆ ನೋವಿದೆ. ಘಟನೆಯ ಕುರಿತ ದಾಖಲೆಗಳನ್ನು ಪೊಲೀಸರು ನುಂಗಿ ಹಾಕಿದ್ದಾರೆ.ಎಂದು ಆರೋಪಿಸಿದ ಅವರು, ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು; ಕಾಮಾಂಧರನ್ನು ರಕ್ಷಿಸುವ ಕೆಲಸ ಎಂದಿಗೂ ನಡೆಯಬಾರದು ಎಂದು ಹೇಳಿದರು.

ಅವಳಿ ಜಿಲ್ಲೆಯಲ್ಲಿ ದುಷ್ಟ ವ್ಯವಸ್ಥೆ ಇರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ತಮ್ಮಣ್ಣ ಶೆಟ್ಟಿ ಆರೋಪಿಸಿದರು.

ಇದಕ್ಕೆ ಮುನ್ನ ಶ್ರೀಕೃಷ್ಣ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂಸ್ಕೃತಕಾಲೇಜು ಮಾರ್ಗವಾಗಿ ಅಜ್ಜರಕಾಡು
ಮೂಲಕ ಕಾಲ್ನಡಿಗೆ ಜಾಥಾ ನಡೆಸಲಾ ಯಿತು. ಸಾಕಷ್ಟು ಸಂಖ್ಯೆಯಲ್ಲಿ ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆ ವೇಳೆ ಮಾತಿನ ಚಕಮಕಿ
ಉಡುಪಿ: ಸೌಜನ್ಯಾ ಪ್ರಕರಣ ಸಂಬಂಧ ಪ್ರತಿಭಟನ ಸಭೆ ಬಳಿ ಸೇರಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯೆಯ ರಿಗೂ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನಾ ಸಭೆ ನಡೆಯುವ ಸ್ಥಳ ಹುತಾತ್ಮ ಸ್ಮಾರಕದ ಬಳಿ ಹಲವು ಮಂದಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯೆಯರು ಸೇರಿದ್ದರು. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ತಡೆದರು. ತಾವೂ ಸೌಜನ್ಯಾ ಪರ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದಾಗಿ ಮಹಿಳೆಯರು ತಿಳಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ.

ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯವರನ್ನು ವಿನಾಕಾರಣ ನಿಂದಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ಮಹಿಳೆಯರು ಹೇಳಿದರು. ಘಟನ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು.

ಸಂಚಾರ ಬದಲಾವಣೆ
ಪ್ರತಿಭಟನೆ ಸ್ಥಳದಲ್ಲಿ ವಾಹನ ಸಂಚಾರವನ್ನು ಕೆಲಕಾಲ ಸಂಪೂರ್ಣ ನಿರ್ಬಂಧಿಸಲಾಯಿತು. ಅಜ್ಜರಕಾಡು, ಬ್ರಹ್ಮಗಿರಿ ಭಾಗದ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಯಿತು. ಘಟನ ಸ್ಥಳದಲ್ಲಿ ಎಸ್‌ಪಿ ಹಾಕೆ ಅಕ್ಷ ಯ್‌ ಮಚ್ಚೀಂದ್ರ ಹಾಗೂ ಹೆಚ್ಚು ವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಯಿತು. ಸಭೆ ಮುಗಿಯುವವರೆಗೂ ಅಲ್ಲೇ ಇದ್ದ ಸ್ವಸಹಾಯ ಸಂಘದ ಸದಸ್ಯೆಯರು, ಮಹೇಶ್‌ ಶೆಟ್ಟಿ ತಿಮರೋಡಿ ಮಾತನಾಡುವಾಗ ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next