Advertisement
ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬೀಜದ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಹೆಚ್ಚಳವಾಗಿದೆ. ಪ್ರತಿ ಕೆಜಿಗೆ ವಿವಿಧ ಬಿತ್ತನೆ ಬೀಜದ ದರ 2ರಿಂದ 61 ರೂ. ವರೆಗೆ ಹೆಚ್ಚಳವಾಗಿದೆ. ಸೋಯಾಬಿನ್ ಬೀಜದ ದರ ಮಾತ್ರ ಪ್ರತಿ ಕೆಜಿಗೆ 7 ರೂ. ಕಡಿಮೆಯಾಗಿದೆ. ಉಳಿದ ಎಲ್ಲಾ ಬೀಜಗಳ ದರ ಏರಿಕೆಯಾಗಿದೆ.ಹೆಸರು, ಉದ್ದು, ತೊಗರಿ ಮುಂತಾದ ಬೀಜಗಳು 5 ಕೆಜಿ, ಸೋಯಾಬಿನ್ ಮತ್ತು ಶೇಂಗಾ 30 ಕೆಜಿ, ಗೋವಿನಜೋಳ 4 ಕೆಜಿ ಪ್ಯಾಕೇಟ್ ಚೀಲಗಳು ಬರುತ್ತವೆ. ವಿವಿಧ ಬೀಜಗಳ ಪ್ಯಾಕೇಟ್ ಚೀಲದ ದರ 60ರಿಂದ 304 ರೂ. ವರೆಗೆ ಹೆಚ್ಚಾಗಿದೆ. 5 ಎಕರೆಗೆ ಮಾತ್ರ ರಿಯಾಯಿತಿ ನೀಡಲಾಗುತ್ತಿದ್ದು, ಉಳಿದ ಬೀಜಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗಿದೆ.
Related Articles
ಬೆಳೆ-ಕಳೆದ ವರ್ಷದ ದರ-ಪ್ರಸಕ್ತ ವರ್ಷದ ದರ-ಹೆಚ್ಚಿದ ದರ
ಹೆಸರು-100-161-61
ಉದ್ದು-89-132-43
ತೊಗರಿ-105-153-48
ಶೇಂಗಾ-76-78-02
ಗೋವಿನಜೋಳ-222-246-24
Advertisement
ಬರಗಾಲದ ಸಂಕಷ್ಟದಲ್ಲಿ ಬೀಜದ ದರ ಹೆಚ್ಚಳ, ಸರಿಯಾದ ಸಮಯಕ್ಕೆ ಗೊಬ್ಬರ ಸಿಗದಂತೆ ಮಾಡಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದ್ದಾರೆ. ಹೇಗೆ ಬೇಸಾಯ ಮಾಡಬೇಕು ತಿಳಿಯುತ್ತಿಲ್ಲ. ಬೆಳೆಗೆ ಸರಿಯಾಗಿ ಬೆಲೆ ಸಿಗದ ವೇಳೆ ಬೀಜದ ದರ ಮಾತ್ರ ಹೆಚ್ಚಿಗೆ ಮಾಡಿರುವುದು ಹೊರೆಯಾಗುತ್ತಿದೆ. ಸರ್ಕಾರ ಬೀಜ-ಗೊಬ್ಬರಗಳ ದರ ಕಡಿಮೆ ಮಾಡಿ ಸರಿಯಾದ ಸಮಯಕ್ಕೆ ದೊರೆಯುವಂತೆ ಮಾಡಬೇಕು.– ಹನುಮರಡ್ಡಿ ಇಟಗಿ, ಚಾಕಲಬ್ಬಿ ಗ್ರಾಮದ ರೈತ ಬಿತ್ತನೆ ಬೀಜದ ದರ ಹೆಚ್ಚು ಕಡಿಮೆ ಮಾಡುವುದು ಬೆಂಗಳೂರಿನ ಕೃಷಿ ಇಲಾಖೆ ಮುಖ್ಯ ಕಚೇರಿ. ಅಲ್ಲಿ ದರ ನಿಗದಿ ಮಾಡಿ ನಮಗೆ ಆದೇಶ ಪ್ರತಿ ಕಳಿಸುತ್ತಾರೆ. ಅದರ ಪ್ರಕಾರ ರೈತರಿಗೆ ಬೀಜ ವಿತರಣೆ ಮಾಡುತ್ತೇವೆ.
– ಭಾರತಿ ಮೆಣಸಿನಕಾಯಿ, ಸಹಾಯಕ ಕೃಷಿ ನಿರ್ದೇಶಕಿ ಮಳೆ ಚೆನ್ನಾಗಿ ಆಗುತ್ತಿದ್ದರೂ ಸರಿಯಾಗಿ ಬೀಜ-ಗೊಬ್ಬರ ದೊರೆಯುತ್ತಿಲ್ಲ. ಬೀಜದ ದರ ಹೆಚ್ಚಿಗೆ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ರೈತರಿಂದ ಬೀಜ ದರ ಏರಿಕೆ ರೂಪದಲ್ಲಿ ಹಣ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗಾದರೆ ರೈತರು ಏನು ಮಾಡಬೇಕು. ಬೀಜ-ಗೊಬ್ಬರ ದರ ಕಡಿಮೆ ಮಾಡಿ ಸರಿಯಾದ ಸಮಯಕ್ಕೆ ವಿತರಣೆ ಮಾಡಬೇಕು.
-ಎಂ.ಆರ್. ಪಾಟೀಲ, ಕುಂದಗೋಳ ಶಾಸಕ -ಗಿರೀಶ ಘಾಟಗೆ