Advertisement

ಶಂಕರಾಚಾರ್ಯರ ತತ್ವ ಬಿತ್ತರಿಸಿ

02:35 PM Jul 22, 2017 | |

ಶಿವಮೊಗ್ಗ: ಶ್ರೀ ಶಂಕರಾಚಾರ್ಯರ ತತ್ವ ಸಿದ್ಧಾಂತಗಳನ್ನು ಗುಡಿಯಲ್ಲಿಟ್ಟು ಪೂಜಿಸುವ ಬದಲು ಇಡೀ ಸಮಾಜಕ್ಕೆ ಬಿತ್ತರಿಸುವ ಕೆಲಸವಾಗಬೇಕಿದೆ ಎಂದು ಶೃಂಗೇರಿ ಮಹಾಸಂಸ್ಥಾನ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಡಾ| ವಿ.ಆರ್‌. ಗೌರಿಶಂಕರ್‌ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸೌರಭ, ವೈದಿಕ ಪರಿಷತ್‌, ಜೋಷಿ ಫೌಂಡೇಶನ್‌ ಹಾಗೂ ಭಜನಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅದ್ವೈತ ವಾಚಸ್ಪತಿ ಬಿರುದು ಮತ್ತು ಶ್ರೀ ಶಂಕರಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶ್ರೀ ಶಂಕರ ಭಗವತ್ಪಾದರ ಕುರಿತ ಅದ್ವೈತ- ಅನುಸಂದಾನ ಕನ್ನಡ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಶಂಕರಾಚಾರ್ಯರು ಸುಮಾರು 1200 ವರ್ಷಗಳ ಹಿಂದೆಯೇ ದೇಶದ ಸಮಗ್ರತೆಯನ್ನು ಪ್ರತಿಪಾದಿಸಿದವರು. ಅಂತಹ ಮಹಾನುಭಾವರನ್ನು ಒಂದು ಜಾತಿ, ವರ್ಗ ಸೀಮಿತಗೊಳಿಸುವುದು ಸರಿಯಲ್ಲ. ಅವರ
ಸಂದೇಶವನ್ನು ನಾಡಿಗೆ ಸಾರಿ ಹೇಳಬೇಕಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಶಂಕರ ಜಯಂತಿ ಕಾರ್ಯಕ್ರಮ ಸಾರ್ವತ್ರಿಕವಾಗಿ ನಡೆಯುತ್ತಿದೆ. ಬೇರೆ ಮಹಾನುಭಾವರ ಜಯಂತಿಗಳಿಗೆ ಹೋಲಿಸಿದರೆ ಶ್ರೀ ಶಂಕರ ಜಯಂತಿ ಯಾವ ಮಟ್ಟದಲ್ಲಿ ನಡೆಯಬೇಕಿತ್ತೋ ಆ ಮಟ್ಟದಲ್ಲಿ ನಡೆಯುತ್ತಿಲ್ಲ. ಮುಂದಿನ ದಿನದಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ಜಯಂತಿ ಆಚರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಈ ನಿಟ್ಟಿನಲ್ಲಿ ಆತ್ಯಂತ ಮಹತ್ವದ್ದಾಗಿದೆ. ಇಂತಹ ಎಲ್ಲಾ ಕಾರ್ಯಕ್ರಮಗಳಿಗೂ ಶ್ರೀ ಮಠ ಬೆಂಬಲಿಸುತ್ತದೆ. ಒಳ್ಳೆಯ ಕೆಲಸಗಳಿಗೆ ಕೈಜೋಡಿಸುವ ಸಂದರ್ಭದಲ್ಲಿ ಲಾಭ ನಷ್ಟದ ಲೆಕ್ಕಾಚಾರ ಹಾಕಬಾರದು. ಸಮಾಜಕ್ಕಾಗಿ ಕೆಲಸ ಮಾಡುವ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜ ಇನ್ನಷ್ಟು ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಾ| ಪಾವಗಡ ಪ್ರಕಾಶ್‌ ಮಾತನಾಡಿ, ಶ್ರೀ ಶಂಕರರನ್ನು ಬ್ರಾಹ್ಮಣ ಸಮಾಜಕ್ಕೆ ಸೀಮಿತಗೊಳಿಸಬಾರದು. ಅವರು ಇಡೀ ಜಗತ್ತಿಗೆ ಸೇರಿದವರು. ಸರ್ವ ಸಮಾನತೆಯನ್ನು ಭೋದಿಸಿವರಲ್ಲಿ ಶ್ರೀ ಶಂಕರರರು ಮೊದಲಿಗರು. ಅವರ ಸಂದೇಶವನ್ನು ಎಲ್ಲೆಡೆ ಸಾರಿ ಹೇಳಬೇಕಿದೆ ಎಂದರು. ಸ್ಮಾರ್ತ, ಮಾಧ್ವ ಎಂಬ ಸಂಘರ್ಷ ಬದಿಗಿಟ್ಟು, ಸಮಾಜದ ಪ್ರತಿಯೊಬ್ಬರೂ ಸಮಾನತೆಯಿಂದ ಒಟ್ಟಾಗಿ ಮುನ್ನಡೆಯಬೇಕು. ಬ್ರಾಹ್ಮಣರೆಲ್ಲರೂ ಒಂದಾಗಿ ಸಾಗಿದಾಗ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೇವೆ. ಈ ನಿಟ್ಟಿನಲ್ಲಿ ಯೋಚನೆ ನಡೆಸಬೇಕೆಂದರು. ಮಾರ್ಕಾಂಡೇಯ ಅವಧಾನಿ ಹಾಗೂ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್‌. ವೆಂಕಟನಾರಾಯಣ ಮಾತನಾಡಿದರು. ಸಭೆಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌, ಡಾ| ಭಾನುಪ್ರಕಾಶ್‌ ಶರ್ಮಾ, ಡಾ| ಎಚ್‌.ವಿ. ಸುಬ್ರಹ್ಮಣ್ಯ, ಎಲ್‌.ಟಿ . ತಿಮ್ಮಪ್ಪ ಹೆಗ್ಗಡೆ, ಕೇಶವಮೂರ್ತಿ, ಶಂಕರಾನಂದ ಜೋಯ್ಸ, ಅಚ್ಯುತರಾವ್‌, ರವಿಶಂಕರ್‌, ಜಿ.ಎಸ್‌. ಅನಂತ್‌, ಸುರೇಖ ಮುರಳೀಧರ್‌ ಮತ್ತಿತರರು ಇದ್ದರು.

Advertisement

ಮ.ಸ. ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬಸೆ ದಿನೇಶ್‌ ಜೋಷಿ ಸ್ವಾಗತಿಸಿದರು. ನಟೇಶ್‌ ಪುರಸ್ಕೃತರನ್ನು
ಪರಿಚಯಿಸಿದರು.

ಶ್ರೀ ಶಂಕರಸೇವಾ ಪ್ರಶಸ್ತಿಗೆ ಭಾಜನರಾದವರು ಇಂಜಿನಿಯರ್‌ ಎಚ್‌.ಎಸ್‌. ಶಿವಶಂಕರ್‌, ಸಾಗರ ಶ್ರೀ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಎಸ್‌.ಆರ್‌. ತಿಮ್ಮಪ್ಪ, ಶಿವಮೊಗ್ಗ ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಡಾ| ಪಿ. ನಾರಾಯಣ, ಭದ್ರಾವತಿ ಶೃಂಗೇರಿ ಮಠದ ಧರ್ಮಾಧಿಕಾರಿ ಕೆ.ಆರ್‌. ಸುಬ್ಬರಾವ್‌, ಶ್ರೀ ಶಂಕರ ಜಯಂತಿ ಸಭಾದ ಬಿ.ಎನ್‌. ಕೃಷ್ಣಮೂರ್ತಿ, ಶ್ರೀ ಶಂಕರ ತತ್ವ ಪ್ರಚಾರಕರಾದ ಕೆ. ಕಾಮಾಕ್ಷಮ್ಮ ಕೂಡಲಿ ಜಗನ್ನಾಥ ಶಾಸ್ತ್ರಿ ಹಾಗೂ ಸಾಗರದ ರವೀಂದ್ರ ಪುಸ್ತಕಾಲಯದ ವೈ.ಎ. ದಂತಿ ಅವರಿಗೆ ಶ್ರೀ ಶಂಕರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಾಚಸ್ಪತಿ ಪುರಸ್ಕೃತರು
ಸೋಂಪುರ ದತ್ತಾಶ್ರಮ ಸೋ.ತಿ. ನಾಗರಾಜ, ಅದ್ವೈತ ವೇದಾಂತ ವಿದ್ವಾಂಸ ಆರ್‌.ವಿ. ವಾಮನಭಟ್ಟ, ಹೊಸಹಳ್ಳಿ ಎಚ್‌.ಕೆ. ಚಿಂತಾಮಣಿ, ವ್ಯಾಕರಣ ವೇದಾಂತ ವಿದ್ವಾಂಸ ಎಂ.ಆರ್‌. ವೆಂಕಟೇಶ್‌ ಅವಧಾನಿ, ಅಗ್ನಿಹೋತ್ರಿ ಕೃಷ್ಣಭಟ್‌ ಸೋಮಯಾಜಿ, ಕೃಷ್ಣಮೂರ್ತಿ ಸೋಮಯಾಜಿ ಅವರಿಗೆ ಅದ್ವೈತ ವಾಚಸ್ಪತಿ ಬಿರುದು ನೀಡಿ ಪುರಸ್ಕೃರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next