Advertisement

ರಾಸಾಯನಿಕ ವಿಧಾನದಲ್ಲಿ ಬಿತ್ತನೆ ಮಾಡಿ

02:50 PM Jun 27, 2017 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಆದರೆ, ಹೆಸರು, ಉದ್ದು, ತೊಗರಿ ಬಿತ್ತನೆ ಮಾಡುವಾಗ ರೈತರು ಜೈವಿಕ ಅಥವಾ ರಾಸಾಯನಿಕ ವಿಧಾನಗಳನ್ನು ಅಳವಡಿಸಿಕೊಂಡು ಬೀಜೋಪಚಾರ ಮಾಡಿದ ಬಳಿಕವೇ ಬಿತ್ತನೆ ಮಾಡಿ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞ ಡಾ| ಜಹೀರ್‌ ಅಹಮದ್‌ ಹೇಳಿದ್ದಾರೆ.

Advertisement

ರಾಷಿಯ ಆಹಾರ ಭದ್ರತೆ ಯೋಜನೆ ಅಡಿ ಚಿಂಚೋಳಿ ತಾಲೂಕಿನ ಸುಂಠಾಣ ಮತ್ತು ಹುಲಸಗೂಡ ಗ್ರಾಮಗಳಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಬಿಜೋಪಚಾರ ಮಾಡಿ ಅವರು ಮಾತನಾಡಿದರು. ದ್ವಿದಳ ಧಾನ್ಯ ಬೆಳೆಯುವ ಪ್ರದೇಶಗಳಲ್ಲಿ ಮಣ್ಣಿನಿಂದ ಉದ್ಭವವಾಗುವ ರೋಗಗಳು ಬೀಜ ಮೊಳಕೆ ಒಡೆಯುವ ಹಂತ,

-ಕವಲು ಕಾಂಡಗಳ ರಚನೆ ಹಾಗೂ ಕಾಯಿ ಆಗುವ ಹಂತದಲ್ಲಿ ರೋಗಗಳು ಉದ್ಭವಗೊಂಡು ಬೇರು ವ್ಯಾಪ್ತಿಯಲ್ಲಿ ಆವರಿಸಿ ನಿಧಾನವಾಗಿ ನೇಟೆ ರೋಗ ಭಾದಿಸುವ ಲಕ್ಷಣಗಳು ಇರತ್ತವೆ ಎಂದು ತಿಳಿಸಿದ್ದಾರೆ. ಆದರಿಂದ ರೈತರು ಪ್ರತಿ ಎಕರೆಗೆ ಬೆಕಾಗುವ ಬೀಜಕ್ಕೆ ಟ್ರೈಕೋಡರ್ಮಾ 20 ಗ್ರಾಂ ಪಿಎಸ್‌ಬಿ,

-200 ಗ್ರಾಂ ರೈಜೋಬಿಯಂ 200 ಗ್ರಾಂ ಉಪಚರಿಸಿ ಬಿತ್ತನೆ ಮಾಡಬೇಕು. ಆಥಾವ ತೇವಾಂಶ ಹೆಚ್ಚಾಗಿರುವ ಹೊಲಗಳಲ್ಲಿ ಸೂಕ್ತ ಬಸಿ ಕಾಲುವೆ ನಿರ್ಮಿಸಿ ಮೆಟಾಲಕ್ಸಿಲ್‌ 4 ಗ್ರಾಂ ಪ್ರತಿ ಕೆಜಿ ಬೀಜಕ್ಕೆ  ಬೀಚೋಪಚರಿಸಿ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ವಿಷಯ ತಜ್ಞ ದೀಪಕ ಸದಾನಂದೆ ಹಾಗೂ ಕ್ಷೇತ್ರ ಸಹಾಯಕ ಸೈದಪ್ಪ ನಾಟೀಕಾರ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next