Advertisement
ನೈಋತ್ಯ ಪದವೀಧರ ಕ್ಷೇತ್ರದ ಮತಗಟ್ಟೆಯನ್ನು ಕಚೇರಿ ಕಟ್ಟಡ ಕೊಠಡಿ ಸಂಖ್ಯೆ 1, 2 ಮತ್ತು ಶಿಕ್ಷಕರ ಕ್ಷೇತ್ರದ ಮತಗಟ್ಟೆಯನ್ನು ಕಚೇರಿ ಕಟ್ಟಡ ಕೊಠಡಿ ಸಂಖ್ಯೆ 3, 4ರಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಶಾಂತವಾಗಿತ್ತು. ಬೆಳಗ್ಗೆ 10ಕ್ಕೆ ಸ್ವಲ್ಪ ಹೊತ್ತಿನ ಸರತಿ ಸಾಲು ಕಂಡು ಬಂದಿತ್ತು.
ಬೆಳ್ತಂಗಡಿ ತಾಲೂಕಿನಲ್ಲಿ ಶಿಕ್ಷಕರ ಕ್ಷೇತ್ರದಿಂದ ಶೇ. 76.7 ಹಾಗೂ ಪದವೀಧರರ ಕ್ಷೇತ್ರದಿಂದ ಶೇ. 62.8 ಮತದಾನವಾಗಿದೆ. ಪದವೀಧರರ ಕ್ಷೇತ್ರದಿಂದ ಒಟ್ಟು 1,281 ಮತದಾರರಿದ್ದು, 805 ಮತಗಳು (451 ಪುರುಷರು, 354 ಮಹಿಳೆಯರು) ಚಲಾವಣೆಯಾಗಿವೆ. ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 953 ಮತದಾರರಿದ್ದು, 731 ಮಂದಿ (389 ಪುರುಷರು, 342 ಮಹಿಳೆಯರು) ಮತ ಚಲಾವಣೆ ಮಾಡಿದ್ದಾರೆ. ಉತ್ತಮ ಮತದಾನ ನಡೆದಿದ್ದು ಬೆಳಗ್ಗಿನಿಂದಲೇ ಉತ್ತಮ ಮತದಾನ ನಡೆದಿದ್ದು, ಶಿಕ್ಷಕರು ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರು. ತಾಲೂಕಿನ ವಿವಿಧ ಕಾಲೇಜುಗಳ ಮತದಾರರು ಚುನಾವಣೆಗೆ ಸ್ಪಂದಿಸಿದ್ದು, ಸಕ್ರಿಯವಾಗಿ ಭಾಗವಹಿಸಿದರು.
Related Articles
ಮಿನಿ ವಿಧಾನಸೌಧ ಆವರಣ ಹಾಗೂ ಹಳೆ ತಾಲೂಕು ಕಚೇರಿ ಬಳಿ ಅಲ್ಲಲ್ಲಿ ಪ್ಲಾಸ್ಟಿಕ್ ಹಾಗೂ ಕಸ ಬಿದ್ದುಕೊಂಡಿರುವುದು ಶಿಕ್ಷಕರಿಗೆ ಮುಜುಗರ ಉಂಟು ಮಾಡಿತು. ಕೆಲವರು ಬಹಿರಂಗವಾಗಿಯೇ ತಾಲೂಕು ಆವರಣದೊಳಗಿನ ಅವ್ಯವಸ್ಥೆಗೆ ಮರುಗಿದರು. ತಾಲೂಕು ಕೇಂದ್ರದಲ್ಲಿಯೇ ಹೀಗಾದರೆ ತಾಲೂಕಿನ ಇತರ ಪ್ರದೇಶಗಳ ಸ್ಥಿತಿ ಹೇಗಾಗಬೇಡ ಎಂಬ ಪ್ರಶ್ನೆಯನ್ನೂ ಹಾಕಿದರು.
Advertisement
ಹಳೆ ತಾಲೂಕು ಕಚೇರಿ ಬಳಿ ಗಿಡಗಳ ಚಟ್ಟಿ ಇಟ್ಟಿದ್ದು, ಗಿಡಗಳು ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗಿತ್ತು. ಜತೆಗೆ ಅದರಕಲ್ಲಿಯೇ ಚಹಾ ಕುಡಿದ ಲೋಟಗಳನ್ನೂ ಎಸೆದಿರುವುದು ಕಂಡು ಬಂತು. ಮಿನಿ ವಿಧಾನ ಆವರಣದಲ್ಲಿ ನೀರಿನ ಬಾಟಲ್‌ಗಳ ರಾಶಿಯೇ ಕಂಡು ಬಂದಿದ್ದು, ಶಿಕ್ಷಕರ ತರ್ಕ ಸರಿಯಾಗಿದೆ ಎಂಬುದನ್ನು ಸಾರಿ ಹೇಳುತ್ತಿತ್ತು.