ತಿರುವನಂತಪುರ/ ನವದೆಹಲಿ: ನಿರೀಕ್ಷೆಯಂತೆಯೇ ನೈಋತ್ಯ ಮಾರುತವು ಮಂಗಳವಾರ ಕೇರಳ ಮತ್ತು ಈಶಾನ್ಯ ರಾಜ್ಯಗಳನ್ನು ಅಪ್ಪಳಿಸಿದ್ದು, ಮುಂಗಾರು ಪ್ರವೇಶವಾಗಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಶಾನ್ಯ ರಾಜ್ಯಗಲಾದ ನಾಗಲ್ಯಾಂಡ್, ಮಿಜೋರಾಂನಲ್ಲೂ ಮುಂಗಾರಿನ ಪ್ರವೇಶವಾಗಿದ್ದು, ಭರ್ಜರಿ ಮಳೆಯಾಗುತ್ತಿದೆ.
ಇಂದಿನಿಂದ 5 ದಿನಗಳ ಕಾಲ ಕೇರಳದಾದ್ಯಂತ ಭಾರೀ ಸಿಡಿಲು,ಮಿಂಚಿನಿಂದ ಕೂಡಿದ ಮಳೆಯಾಗಲಿದೆ.ಮುಂಗಾರಿನ ಪರಿಣಾಮ ಕರಾವಳಿ ಕರ್ನಾಟಕದಲ್ಲೂ ಉತ್ತಮ ಮಳೆಯಾ ಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮಳೆಗಾಗಿ ಎದುರು ನೋಡುತ್ತಿದ್ದ ರೈತಾಪಿ ವರ್ಗ ಹರ್ಷಗೊಂಡಿದ್ದು ಕೃಷಿ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದಾರೆ.
ಜೂ.4ಕ್ಕೆ ರಾಜ್ಯ ಪ್ರವೇಶ
ಈಗಾಗಲೇ ಕೇರಳ ಪ್ರವೇಶಿಸಿರುವ ಹಿನ್ನಲೆಯಲ್ಲಿ ಜೂನ್ 4ರಂದು ಕರ್ನಾಟಕದ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ ಪಡೆಯುವ ಸಾಧ್ಯತೆಯಿದೆ. ಆನಂತರದಲ್ಲಿ ಉತ್ತರ ಒಳನಾಡು ಪ್ರದೇಶಕ್ಕೆ ಪ್ರವೇಶ ಪಡೆದು ನಂತರದಲ್ಲಿ ದಕ್ಷಿಣ ಒಳನಾಡು ಪ್ರವೇಶಿಸಲಿದೆ.