Advertisement

ಗಗನ ಸಖೀ ತಮಾಷೆ: ಪ್ರಯಾಣಿಕರು ತಬ್ಬಿಬ್ಬು

01:07 AM Aug 01, 2019 | Team Udayavani |

ನಾಶ್‌ವಿಲ್ಲೆ: ವಿಮಾನ ಏರುವ ಪ್ರಯಾಣಿಕರನ್ನು ಕೈಮುಗಿದು ಸ್ವಾಗತಿಸುವ ನಿಯಮವನ್ನು ಭಾರತದ ಬಹುತೇಕ ವಿಮಾನಯಾನ ಕಂಪನಿಗಳು ಅನುಸರಿಸುತ್ತವೆ. ಬಾಗಿಲಲ್ಲೇ ನಿಂತು ಕೈಮುಗಿದು ನಗು ನಗುತ್ತಾ ಎಲ್ಲ ಪ್ರಯಾಣಿಕರನ್ನು ಸ್ವಾಗತಿಸಿದ ನಂತರ ಗಗನಸಖೀಯರು ಇತರ ಕಾರ್ಯಗಳಿಗೆ ಸಾಗುತ್ತಾರೆ. ಆದರೆ ಫಿಲಡೆಲ್ಫಿಯಾದ ಸೌತ್‌ವೆಸ್ಟ್‌ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಕರನ್ನು ಅತ್ಯಂತ ವಿಚಿತ್ರ ರೀತಿಯಲ್ಲಿ ಸ್ವಾಗತಿಸಲಾಗಿದೆ.

Advertisement

ಗಗನಸಖೀಯೊಬ್ಬಳು ಪ್ರಯಾಣಿಕರು ಲಗೇಜ್‌ಗಳನ್ನು ಇಡಲು ಒದಗಿಸಲಾಗಿರುವ ಕಂಪಾರ್ಟ್‌ಮೆಂಟ್‌ನಲ್ಲಿ ಅಡಗಿ ಮಲಗಿದ್ದಳು. ಪ್ರಯಾಣಿಕರು ವಿಮಾನ ಏರುತ್ತಿದ್ದಂತೆ ಆಕೆ ಅಲ್ಲೇ ಮಲಗಿ ಸ್ವಾಗತಿಸಲು ಆರಂಭಿಸಿದಳಂತೆ. ಈ ರೀತಿ ಗಗನಸಖೀ ಕಂಪಾರ್ಟ್‌ಮೆಂಟ್‌ನಲ್ಲಿ ಅಡಗಿ ಕುಳಿತಿರುವ ವೀಡಿಯೋ ಭಾರಿ ವೈರಲ್ ಆಗಿದ್ದು, ಇಂತಹ ಅಚ್ಚರಿ ನೀಡುವ ಸ್ವಾಗತ ವಿಧಾನದಲ್ಲಿ ಗಗನಸಖೀಯ ಸುರಕ್ಷತೆಯನ್ನು ಅಪಾಯಕ್ಕಿಡಲಾಗಿತ್ತೇ ಎಂಬ ಪ್ರಶ್ನೆ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next