Advertisement

ಸದರ್ನ್ ಟ್ರಾವೆಲ್ಸ್‌ನಿಂದ ಹಾಲಿಡೇ ಬಜಾರ್‌ ಪ್ರವಾಸ

11:47 AM Mar 05, 2017 | Team Udayavani |

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಟ್ರಾವೆಲ್‌ ಏಜೆಂಟ್ಸ್‌ ಹಾಗೂ ಪ್ರವಾಸ ಆಯೋಜಕ ಸಂಸ್ಥೆ ಸದರ್ನ್ ಟ್ರಾವೆಲ್ಸ್‌ ಶನಿವಾರ ಮತ್ತು ಭಾನುವಾರ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಹಾಲಿಡೇ ಬಜಾರ್‌ ಪ್ರವಾಸ ಮೇಳ ಹಮ್ಮಿಕೊಂಡಿದೆ.

Advertisement

ನಗರದ ಸುಬೇದಾರ್‌ ಛತ್ರಂ ರಸ್ತೆಯ ಜೆ.ಪಿ. ಕಾರ್ಡಿಯಲ್‌ ಹೋಟೆಲ್‌ನಲ್ಲಿ ಶನಿವಾರ ಆರಂಭವಾದ ಮೇಳದಲ್ಲಿ ಸಂಸ್ಥೆಯ ಮಾರಾಟ ವಿಭಾಗದ ಜನ ರಲ್‌ ಮ್ಯಾನೇಜರ್‌ ಸುಧೀರ್‌ ತುಲಿ ಮಾತನಾಡಿ, ಸದರನ್‌ ಟ್ರಾವೆಲ್ಸ್‌ಗೆ 46 ವರ್ಷಗಳ ಇತಿಹಾಸವಿದ್ದು, ದಕ್ಷಿಣ ಭಾರತದ ಪ್ರವಾಸಿಗರಿಗೆ ಹಲವು ವರ್ಷಗಳಿಂದ ಹಾಲಿಡೇ ಬಜಾರ್‌ ಮೇಳ ಆಯೋಜಿಸುತ್ತಿದ್ದೇವೆ.

ಫೆಬ್ರವರಿ ಮೊದಲ ವಾರದಿಂದ ಆರಂಭವಾದ ಮೇಳ ಈಗಾಗಲೇ ಆಂಧ್ರಪ್ರದೇಶ ಮತ್ತು ತೆಲಂಗಾಣದ 23 ನಗರಗಳನ್ನು ಮುಗಿಸಿ, ಈಗ ಕೊನೆ ಹಂತವಾಗಿ ಕರ್ನಾಟಕದ 4 ನಗರಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಈ ಹೋಟೆಲಲ್ಲಿ, ಮೈಸೂರು ನಜರಾಬಾದ್‌ನ ಹೋಟೆಲ್‌, ಜೆ.ಪಿ. ಪ್ಯಾಲೇಸ್‌ನಲ್ಲಿ, ಹುಬ್ಬಳ್ಳಿ ಏರ್‌ಪೋಟ್‌ ರಸ್ತೆಯ ಹೋಟೆಲ್‌ ಡೆನಿಸ್ಸನ್ಸ್‌ನಲ್ಲಿ ಹಾಗೂ ಬೆಳಗಾವಿ ಕ್ಲಬ್‌ ರಸ್ತೆಯ ಹೋಟೆಲ್‌ ಈಫಾದಲ್ಲಿ ಮೇಳ ನಡೆಯುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next