ಮಂಗಳೂರು: ಪಾಲಕ್ಕಾಡ್ ವಿಭಾಗದ ವಿವಿಧ ಕಡೆಗಳಲ್ಲಿ ಹಳಿ ನಿರ್ವಹಣ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾದ ಕಾರಣ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜ. 21ರಂದು ನಂ.16348 ಮಂಗಳೂರು ಸೆಂಟ್ರಲ್ ತಿರುವನಂತ ಪುರಂ ಸೆಂಟ್ರಲ್ ಎಕ್ಸ್ ಪ್ರಸ್ ರೈಲನ್ನು ಮಾರ್ಗದಲ್ಲಿ ಒಂದು ಗಂಟೆ ಕಾಲ, ನಂ.16337 ಓಖಾ ಎರ್ನಾಕುಲಂ ಜಂಕ್ಷನ್ ಬೈ ವೀಕ್ಲಿ ಎಕ್ಸ್‌ಪ್ರೆಸ್ 50 ನಿಮಿಷ ಕಾಲ, ನಂ.16528 ಕಣ್ಣೂರು ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು 50 ನಿಮಿಷ ಕಾಲ ನಿಯಂತ್ರಿಸಲಾಗುವುದು.
ಜ. 22ರಂದು ನಂ.02197 ಜಬಲ್ಪುರ ಕೊಯಮತ್ತೂರು ಜಂಕ್ಷನ್ ವೀಕ್ಲಿ ಸ್ಪೆಷಲ್ ಸೂಪರ್‌ಫಾಸ್ಟ್ ರೈಲನ್ನು 1.10 ಗಂಟೆ ಕಾಲ, ನಂ.12686 ಮಂಗಳೂರು ಸೆಂಟ್ರಲ್ ಚೆನ್ನೈ ಸೆಂಟ್ರಲ್ ರೈಲು 20 ನಿಮಿಷ ಕಾಲ ನಿಯಂತ್ರಿಸಲಾಗುವುದು.
ಜ. 23ರಂದು 16337 ಓಖಾ ಎರ್ನಾಕುಲಂ ಜಂಕ್ಷನ್ ಬೈ ವೀಕ್ಲಿ ಎಕ್ಸ್ ಪ್ರಸ್ ರೈಲು 1 ಗಂಟೆ ಕಾಲ, ನಂ.22654 ನಿಜಾಮುದ್ದೀನ್ ತಿರುವನಂತಪುರಂ ಸೆಂಟ್ರಲ್ ವೀಕ್ಲಿ ಎಕ್ಸ್‌ಪ್ರೆಸ್ 50 ನಿಮಿಷ ಕಾಲ, ನಂ.16528 ಕಣ್ಣೂರು ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ 1 ಗಂಟೆ ಕಾಲ ನಿಯಂತ್ರಿಸಲಾಗುವುದು. ಜ. 25ರಂದು ನಂ.02197 ಜಬಲ್ಪುರ ಕೊಯಮತ್ತೂರು ಜಂಕ್ಷನ್ ವೀಕ್ಲಿ ಸ್ಪೆಷಲ್ ರೈಲು 1.10 ಗಂಟೆ ಕಾಲ, ನಂ.12686 ಮಂಗಳೂರು ಸೆಂಟ್ರಲ್-ಚೆನ್ನೈ ಸೆಂಟ್ರಲ್ ರೈಲು 30 ನಿಮಿಷ ಕಾಲ ನಿಯಂತ್ರಿಸಲಾಗುವುದು.
ಜ. 30ರಂದು 16337 ಓಖಾ ಎರ್ನಾಕುಲಂ ರೈಲು 1 ಗಂಟೆ ಕಾಲ, ನಂ.22654 ನಿಜಾಮುದ್ದೀನ್ ತಿರುವನಂತಪುರಂ ಸೆಂಟ್ರಲ್ ವೀಕ್ಲಿ ರೈಲು 50 ನಿಮಿಷ ಕಾಲ, ನಂ.16528 ಕಣ್ಣೂರು ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ 1 ಗಂಟೆ ಕಾಲ, ನಂ.12686 ಮಂಗಳೂರು ಸೆಂಟ್ರಲ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್ ಪ್ರಸ್ ರೈಲು 20 ನಿಮಿಷಗಳ ಕಾಲ ನಿಂತ್ರಿಸಲಾಗುವುದು.
ಜ. 31ರಂದು ನಂ.16338 ಎರ್ನಾಕುಲಂ ಜಂಕ್ಷನ್ ಓಖಾ ಬೈ ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು 25 ನಿಮಿಷ ಕಾಲ, ನಂ.12618 ನಿಜಾಮುದ್ದೀನ್ ಎರ್ನಾಕುಲಂ ಜಂಕ್ಷನ್ ಮಂಗಳಾ ಎಕ್ಸ್‌ಪ್ರೆಸ್ 20 ನಿಮಿಷ ಕಾಲ ತಡೆಹಿಡಿಯಲಾಗುವುದು ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.