Advertisement

ದಕ್ಷಿಣ ಆಫ್ರಿಕಾ ಬಳಿಕ ಪಾಕಿಗೂ ಕುಸಿತದ ಭೀತಿ

11:45 PM Jan 26, 2021 | Team Udayavani |

ಕರಾಚಿ: ಪಾಕಿಸ್ಥಾನದಲ್ಲಿ 14 ವರ್ಷಗಳ ಬಳಿಕ ಟೆಸ್ಟ್‌ ಆಡತೊಡಗಿದ ದ.ಆಫ್ರಿಕಾ ಮೊದಲ ದಿನದಾಟದಲ್ಲಿ ತಿರುಗೇಟು ನೀಡಲಾರಂಭಿಸಿದೆ. ಹರಿಣಗಳ ಪಡೆಯನ್ನು 220ಕ್ಕೆ ಉರುಳಿಸಿದ ಖುಷಿಯಲ್ಲಿದ್ದ ಪಾಕ್‌, ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 33 ರನ್‌ ಗಳಿಸಿ ಸಂಕಟಕ್ಕೆ ಸಿಲುಕಿದೆ.

Advertisement

ಪಾಕ್‌ ಈಗಾಗಲೇ ಅಗ್ರ ಕ್ರಮಾಂಕದ ಇಮ್ರಾನ್‌ ಬಟ್‌, ಅಬಿದ್‌ ಅಲಿ, ನಾಯಕ ಬಾಬರ್‌ ಆಜಂ ಮತ್ತು ನೈಟ್‌ ವಾಚ್‌ಮನ್‌ ಶಾಹೀನ್‌ ಅಫ್ರಿದಿ ಅವರ ವಿಕೆಟ್‌ ಕಳೆದುಕೊಂಡಿದೆ. ಯಾರೂ ಎರಡಂಕೆಯ ಮೊತ್ತ ದಾಖಲಿಸಿಲ್ಲ. ರಬಾಡ 2, ನೋರ್ಜೆ ಮತ್ತು ಮಹಾರಾಜ್‌ ಒಂದೊಂದು ವಿಕೆಟ್‌ ಉರುಳಿಸಿದರು.

ದಕ್ಷಿಣ ಆಫ್ರಿಕಾಕ್ಕೆ ಯಾಸಿರ್‌ ಶಾ (54ಕ್ಕೆ 3), ನೌಮಾನ್‌ ಅಲಿ (38ಕ್ಕೆ 2) ಮತ್ತು ಶಾಹೀನ್‌ ಅಫ್ರಿದಿ (49ಕ್ಕೆ 2) ಕಡಿವಾಣ ಹಾಕಿದರು. ಸರದಿಯ ಏಕೈಕ ಅರ್ಧ ಶತಕ ಆರಂಭಕಾರ ಡೀನ್‌ ಎಲ್ಗರ್‌ (58) ಅವರಿಂದ ದಾಖಲಾಯಿತು. ಜಾರ್ಜ್‌ ಲಿಂಡೆ 35, ಡು ಪ್ಲೆಸಿಸ್‌ 23, ರಬಾಡ 21 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next