Advertisement

ದಸರಾ ಪ್ರಯುಕ್ತ ವಿಶೇಷ ರೈಲು ಸಂಚಾರ 

06:35 AM Oct 07, 2018 | Team Udayavani |

ಹುಬ್ಬಳ್ಳಿ: ನೈಋತ್ಯ ರೈಲ್ವೆ ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ದಸರಾ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. 

Advertisement

ಬೆಂಗಳೂರು ನಗರ-ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ (06557) ರೈಲು ಅ.9ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8:45ಕ್ಕೆ ಬೆಂಗಳೂರು ನಗರದಿಂದ ಹೊರಟು ಬೆಳಗ್ಗೆ 11:35ಕ್ಕೆ ಮೈಸೂರು ತಲುಪಲಿದೆ. ಅದೇ ರೀತಿ ಅ.10ರಿಂದ 22ರ ವರೆಗೆ ಮೈಸೂರಿನಿಂದ ಮಧ್ಯಾಹ್ನ 12:50ಕ್ಕೆ ಹೊರಡುವ ರೈಲು (06558) ಮಧ್ಯಾಹ್ನ 3:45ಕ್ಕೆ ಬೆಂಗಳೂರು ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಒಟ್ಟು 13 ಟ್ರಿಪ್‌ ರೈಲು ಸಂಚರಿಸಲಿದೆ.

ಶಿವಮೊಗ್ಗ ಟೌನ್‌-ಶ್ರವಣಬೆಳಗೊಳ ವಾರದಲ್ಲಿ ಮೂರು ದಿನ ಸಂಚಾರದ ವಿಶೇಷ ಎಕ್ಸ್‌ಪ್ರೆಸ್‌ (06223) ರೈಲು ಅ.9ರಿಂದ 25ರವರೆಗೆ ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಬೆಳಗ್ಗೆ 6:25ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ
11:25ಕ್ಕೆ ಶ್ರವಣಬೆಳಗೊಳಕ್ಕೆ ತಲುಪಲಿದೆ.

ಅ.9ರಿಂದ25ರವರೆಗೆಶ್ರವಣಬೆಳಗೊಳ-ಶಿವಮೊಗ್ಗ ಟೌನ್‌ ವಿಶೇಷ ಎಕ್ಸ್‌ಪ್ರೆಸ್‌ (06224) ರೈಲು ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಮಧ್ಯಾಹ್ನ 1:35ಕ್ಕೆ ಶ್ರವಣಬೆಳಗೊಳದಿಂದ ಪ್ರಯಾಣ ಬೆಳೆಸಿ ಸಂಜೆ 7:10ಕ್ಕೆ ಶಿವಮೊಗ್ಗ ಟೌನ್‌ ಸೇರಲಿದೆ.

ಹಾಲ್ಟ್ ನಿಲ್ದಾಣಗಳ ಸೇವೆ ಸ್ಥಗಿತ: ನೈಋತ್ಯ ರೈಲ್ವೆ ಕೆಲವು ಹಾಲ್ಟ್ ನಿಲ್ದಾಣಗಳನ್ನು 3 ತಿಂಗಳ ಅವಧಿಗೆ ಬಂದ್‌ ಮಾಡಿದೆ. ಆದಿಚುಂಚನಗಿರಿ, ಸಿದ್ದಾಪುರ, ಪಾಲಹಳ್ಳಿ, ದೊಡ್ಡನಟ್ಟ, ಗಣ್ಣಘಟ್ಟ, ಗೊಟ್ಟಿಹಳ್ಳಿ, ಗಿಡ್ನಹಳ್ಳಿ ಹಾಲ್ಟ್ ನಿಲ್ದಾಣಗಳನ್ನು ಅ.7ರಿಂದ ಮೂರು ತಿಂಗಳ ಅವಧಿಗೆ ಬಂದ್‌ ಮಾಡಲಾಗುವುದು.

Advertisement

ಯಶವಂತಪುರ-ಮೈಸೂರು ಪ್ಯಾಸೆಂಜರ್‌(56215) ರೈಲು ಆದಿಚುಂಚನಗಿರಿ ಹಾಗೂ ಸಿದ್ದಾಪುರ, ಬೆಂಗಳೂರು ನಗರ-ಕೋಲಾರ ಪ್ಯಾಸೆಂಜರ್‌ (76551) ರೈಲು ದೊಡ್ಡನಟ್ಟ, ಜನ್ನಘಟ್ಟ, ಗಿಡ್ನಳ್ಳಿ ನಿಲ್ದಾಣದಲ್ಲಿ; ಚನ್ನಪಟ್ಟಣ-ಕೋಲಾರ (76525) ದೊಡ್ಡನಟ್ಟ, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಗಿಡ್ನಳ್ಳಿ ನಿಲ್ದಾಣದಲ್ಲಿ 3 ತಿಂಗಳು ನಿಲುಗಡೆಗೊಳ್ಳುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next