Advertisement
ವಿವಿಧ ಕೆಲಸ ಕಾರ್ಯಗಳಿಗೆ ತೆರಳುವ ಪದವೀಧರರು ಹಾಗೂ ಶಿಕ್ಷಕರು ಬೆಳಗ್ಗೆಯೇ ಮತಗಟ್ಟೆಗಳತ್ತ ತೆರಳಿ ಮತ ಚಲಾಯಿಸಿದರು. ಹೊತ್ತೇರುತ್ತಿದ್ದಂತೆ ಮತದಾರರ ಸಂಖ್ಯೆ ವಿರಳವಾಯಿತು.
ಮತಗಟ್ಟೆ ಪ್ರದೇಶಕ್ಕೆ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
ವಿವಿಧ ಅಭ್ಯರ್ಥಿಗಳ ಪರ ಚುನಾವಣಾ ಮತಗಟ್ಟೆಗಳ ಸಮೀಪ ಬೂತ್‌ಗಳನ್ನು ಸ್ಥಾಪಿಸಿ ಅಭ್ಯರ್ಥಿಗಳ ಮಾಹಿತಿ ಮತದಾರರಿಗೆ ನೀಡುವ ಕೆಲಸ ನಡೆಯಿತು.
Advertisement
ಕೆಲವರಿಗೆ ಶಾಮಿಯಾನದ ವ್ಯವಸ್ಥೆ ಇದ್ದರೆ, ಇನ್ನು ಕೆಲವರು ಮರಗಳ ನೆರಳಲ್ಲಿ ಹಾಗೂ ಕೆಲವರು ಬಿಸಿಲಲ್ಲೇ ಇದ್ದರು. ಮಂಗಳೂರಿನಲ್ಲಿ ಬೆಳಗ್ಗೆ ಮತದಾನಕ್ಕೆ ಆಗಮಿಸಿದವರಿಗೆ ಮಳೆಯ ಸಿಂಚನವಾಯಿತು. ಅನಂತರ ಬಿಸಿಲು ಕಾಣಿಸಿತ್ತು.
ಉಡುಪಿ: ತಲಾ ಶೇ. 75.38 ಶೇ. 80.72 ಮತದಾನಉಡುಪಿ: ನೈಋತ್ಯ ಪದವೀ ಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲಾದ್ಯಂತ ಶಾಂತಿಯುತವಾಗಿ ನಡೆದಿದೆ. ಈ ಬಾರಿ ಮತದಾರರು ಹೆಚ್ಚು ಉತ್ಸುಕತೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಪದವೀಧರರ ಮತದಾನಕ್ಕೆ 19, ಶಿಕ್ಷಕರ ಕ್ಷೇತ್ರದ ಮತದಾನಕ್ಕೆ 10 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಪದವೀಧರರಿಗೆ ಸಂಬಂಧಿಸಿ 7,857 ಪುರುಷ, 9,176 ಮಹಿಳಾ ಮತದಾರರು ಸೇರಿದಂತೆ 17,033 ಮತದಾರರಲ್ಲಿ 6,220 ಪುರುಷರು, 6,619 ಮಹಿಳೆಯರು ಸೇರಿದಂತೆ 12,839 ಮತದಾರರು ಮತದಾನ ಮಾಡಿದ್ದಾರೆ. ಶೇ. 75.38ರಷ್ಟು ಮತದಾನವಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ 1,717 ಪುರುಷ, 2350 ಮಹಿಳಾ ಮತದಾರರು ಸೇರಿ 4067 ಮತದಾರರಲ್ಲಿ 1475 ಪುರು ಷರು, 1808 ಮಹಿಳಾ ಮತದಾರರು ಸಹಿತವಾಗಿ 3283 ಮತದಾರರು ಮತದಾನ ಮಾಡಿದ್ದು ಶೇ. 80.72ರಷ್ಟು ಮತದಾನ ದಾಖಲಾಗಿದೆ. ಕಳೆದ ಚುನಾವಣೆಗಳಿಗೆ ಹೋಲಿ ಸಿದರೆ ಈ ಬಾರಿ ಉತ್ತಮ ಮತದಾನ ವಾಗಿದೆ. ಮತದಾನದ ಅನಂತರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೇ ಪಕ್ಷೇತರದ ನಿಂತಿದ್ದ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟೊಟ್ಟಿಗೆ ಉಭಯಕುಶಲೋಪರಿ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ. ಮೊಬೈಲ್, ಬ್ಯಾಗ್
ಇರಿಸಲು ವ್ಯವಸ್ಥೆ
ಮತಗಟ್ಟೆಗೆ ಆಗಮಿಸುವವರಿಗೆ ಪ್ರತ್ಯೇಕ ಕೌಂಟರ್‌ಗಳಲ್ಲಿ ಮಾಹಿತಿ ನೀಡಿ ಬ್ಯಾಗ್, ಮೊಬೈಲ್ ಇರಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.