Advertisement

ದರ್ಶನ್‌ ಬಂಧನ To ಕಲ್ಕಿ ಟ್ರೇಲರ್..‌ ಈ ವಾರ ಸುದ್ದಿಯಾದ ಪ್ರಮುಖ ಸೌತ್‌ ಸಿನಿ ಸುದ್ದಿಗಳಿವು

06:59 PM Jun 15, 2024 | Team Udayavani |

ಬೆಂಗಳೂರು: ಬಣ್ಣದ ಲೋಕದಲ್ಲಿ ಈ ವಾರ ಅನೇಕ ವಿಚಾರಗಳು ಟಾಕ್‌ ಆಫ್‌ ಟೌನ್‌ ಆಗಿದೆ. ಕೊಲೆ ಪ್ರಕರಣ, ನಟನ ಸಾವು, ಟ್ರೇಲರ್‌, ಸಿನಿಮಾ ರಿಲೀಸ್ ಹೀಗೆ.. ಸೌತ್‌ ಸಿನಿವಲಯ ಈ ವಾರ ಜೋರಾಗಿಯೇ ಎಲ್ಲರ ಚಿತ್ತವನ್ನು ಸೆಳೆದಿದೆ.

Advertisement

ವಾರದಲ್ಲಿ ಸುದ್ದಿಯಾದ ದಕ್ಷಿಣ ಸಿನಿವಲಯ:  

ದರ್ಶನ್‌ ಬಂಧನ: ಕನ್ನಡದ ಖ್ಯಾತ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೊಲೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದಾರೆ. ರೇಣುಕಾಸ್ವಾಮಿ ಎನ್ನುವವನನ್ನು ಅಪಹರಿಸಿ, ಶೆಡ್‌ ವೊಂದರಲ್ಲಿ ಹಲ್ಲೆಗೈದು ಬಳಿಕ ಶವವನ್ನು ಮೋರಿಗೆ ಎಸೆಯಲಾಗಿದೆ. ಈ ಪ್ರಕರಣದಲ್ಲಿ ನಟ ದರ್ಶನ್‌ , ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ.

ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್‌ ಮಾಡಿದ ಕಾರಣ ಈ ಕೃತ್ಯವನ್ನಬು ಎಸೆಯಲಾಗಿದೆ. ಖ್ಯಾತ ನಟನೊಬ್ಬ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ವಿಚಾರ ದೇಶದಲ್ಲೆಡೆ ಸುದ್ದಿಯಾಗಿದೆ.

ಕಲ್ಕಿ 2898 ಎಡಿ ಟ್ರೇಲರ್‌ ಸದ್ದು: ಪ್ರಭಾಸ್‌ ಅವರ ಬಹುನಿರೀಕ್ಷಿತ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ʼಕಲ್ಕಿ 2898ʼ ಚಿತ್ರದ ಟ್ರೇಲರ್‌ ರಿಲೀಸ್‌(ಜೂ.10 ರಂದು) ಆಗಿ, ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ಧೂರಿ ದೃಶ್ಯ, ಅಮೋಘ ವಿಎಫ್‌ ಎಕ್ಸ್‌ ಗಳಿಂದ ʼಕಲ್ಕಿʼ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.  ಇದೇ ಜೂ.27 ರಂದು ಚಿತ್ರ ರಿಲೀಸ್‌ ಆಗಲಿದೆ.

Advertisement

‌ಸಾಲು ಸಾಲು ಚಿತ್ರಗಳು ರಿಲೀಸ್.. ಸ್ಯಾಂಡಲ್‌ ವುಡ್‌ ನಲ್ಲಿ ನಟ ದರ್ಶನ್‌ ಬಂಧನ ವಿಚಾರವೇ ಎಲ್ಲ ಕಡೆ ಸುದ್ದಿ ಆಗುತ್ತಿದ್ದರೂ, ಥಿಯೇಟರ್‌ ನಲ್ಲಿ ಮನರಂಜನೆಗೆ ಮಾತ್ರ ಯಾವುದೇ ಕಮ್ಮಿಯಿಲ್ಲದಂತೆ ಈ ವಾರ 4 ಚಿತ್ರಗಳು ರಿಲೀಸ್‌ ಆಗಿದೆ. ʼಕೋಟಿʼ, ʼಲವ್‌ ಲೀʼ  ʼಶಿವಮ್ಮʼ ʼಚೆಫ್‌ ಚಿದಂಬರʼ ಚಿತ್ರಗಳು ರಿಲೀಸ್‌ ಆಗಿವೆ.

ಇತ್ತ ಕಾಲಿವುಡ್‌ ನಲ್ಲಿ ವಿಜಯ್‌ ಸೇತುಪತಿ ಅವರ 50ನೇ ಚಿತ್ರ ʼಮಹಾರಾಜʼ ಹಾಗೂ ಟಾಲಿವುಡ್‌ ನಲ್ಲಿ ಸುಧೀರ್‌ ಬಾಬು ಅವರ ʼಹರೋಮ್ ಹರʼ ಎನ್ನು ಕ್ರೈಮ್‌ ಥ್ರಿಲ್ಲರ್‌ ಚಿತ್ರಗಳು ರಿಲೀಸ್‌ ಆಗಿವೆ.

ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕಾರ: ಟಿಡಿಪಿ ಜೊತೆಗಿನ ಮೈತ್ರಿಯಿಂದ ಚುನಾವಣೆಯಲ್ಲಿ ಭರ್ಜರಿ ಸೀಟುಗಳನ್ನು ಗೆದ್ದ ಜನಸೇನಾ ಪಕ್ಷದ ಪವನ್‌ ಕಲ್ಯಾಣ್‌ ಆಂಧ್ರದ ಡಿಸಿಎಂ ಆಗಿ ಪ್ರಮಾಣ ವಚನ ಸೀಕ್ವಾರ ಮಾಡಿದ್ದು, ಈ ವಾರ ಆಂಧ್ರದಲ್ಲಿ ಹೆಚ್ಚು ಸುದ್ದಿಯಾದ ವಿಚಾರಗಳಲ್ಲಿ ಒಂದು.

ಶವವಾಗಿ ಪತ್ತೆಯಾದ ಖ್ಯಾತ ನಟ: ತಮಿಳಿನ ಅನೇಕ ಸಿನಿಮಾದಲ್ಲಿ ನಟಿಸಿ, ʼಪಪ್ಪುʼ ಎಂದೇ ಖ್ಯಾತರಾಗಿದ್ದ ನಟ ಪ್ರದೀಪ್ ಕೆ ವಿಜಯನ್ ಶವವಾಗಿ ಪತ್ತೆಯಾಗಿದ್ದು, ಸಿನಿಮಂದಿಗೆ ಆಘಾತವನ್ನು ನೀಡಿತು. 2013 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ‘ತೇಗಿಡಿ’ ಮತ್ತು ‘ಹೇ ಸಿನಾಮಿಕಾ’ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಅವರು ರಾಘವ ಲಾರೆನ್ಸ್‌ ಅವರ ʼರುದ್ರನ್ʼ ಸಿನಿಮಾದಲ್ಲಿ ನಟಿಸಿದ್ದರು.

ಇನ್ನು ವಿಷ್ಣು ಮಂಚು ಅವರ ಪ್ಯಾನ್‌ ಇಂಡಿಯಾ ʼಕಣ್ಣಪ್ಪʼ ಚಿತ್ರದ ಟೀಸರ್‌ ಕೂಡ ಈ ವಾರ ರಿಲೀಸ್‌ ಆಗಿ ಸದ್ದು ಮಾಡಿದೆ. ಇನ್ನೊಂದೆಡೆ ಕಮಲ್‌ ಹಾಸನ್‌ ಅವರ ʼಥಗ್‌ ಲೈಫ್‌ʼ ಚಿತ್ರದ ಶೂಟಿಂಗ್‌ ವೇಳೆ ಮಾಲಿವುಡ್‌ ನಟ ಜಾರ್ಜ್‌ ಅವರಿಗೆ ಗಾಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next