Advertisement
ನರೇಶ್ ಅವರೇ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ನಿರ್ದೇಶಕ ನರೇಶ್ ಈ ಚಿತ್ರವನ್ನು ಎಲ್ಲಾ ಸೌತ್ ಇಂಡಿಯನ್ ಹೀರೋಗಳಿಗೆ ಅರ್ಪಿಸುತ್ತಿದ್ದಾರೆ.
Related Articles
Advertisement
“ಸೌತ್ ಇಂಡಿಯನ್ ಹೀರೋ’ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ. ಎಲ್ಲದರಲ್ಲೂ ಲಾಜಿಕ್ ಹುಡುಕುವ ಲಕ್ಷ್ಮಣ್ ರಾವ್ ಎಂಬ ವ್ಯಕ್ತಿ ಸಿನಿಮಾಕ್ಕೆ ಎಂಟ್ರಿಕೊಟ್ಟರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಈ ಬಗ್ಗೆ ಮಾತನಾಡುವ ನರೇಶ್, “ಮೊದಲು ಹುಟ್ಟಿದ ಪಾತ್ರವೇ ಲಾಜಿಕ್ ಲಕ್ಷ್ಮಣ್ ರಾವ್. ಸಾಮಾನ್ಯವಾಗಿ ಸಿನಿಮಾದವರು ಲಾಜಿಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲೂ ಕಮರ್ಷಿಯಲ್ ಸಿನಿಮಾದಲ್ಲಿ ಹೀರೋ ಏಳೆಂಟು ಜನರಿಗೆ ಹೊಡೆಯುವುದು ಸೇರಿದಂತೆ ಅನೇಕ ಸಾಹಸಗಳನ್ನು ಮಾಡುತ್ತಾರೆ. ಇವೆಲ್ಲವನ್ನು ನಾವು ಲಾಜಿಕ್ ದೃಷ್ಟಿಯಿಂದ ನೋಡಲಾಗುವುದಿಲ್ಲ. ಆದರೆ, ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ ಎಲ್ಲದರಲ್ಲೂ ಲಾಜಿಕ್ ಹುಡುಕುವ ವ್ಯಕ್ತಿತ್ವ ಹೊಂದಿರುತ್ತದೆ. ಇಂತಹ ವ್ಯಕ್ತಿ ಸಿನಿಮಾಕ್ಕೆ ಬರುತ್ತಾನೆ, ಸ್ಟಾರ್ ಆಗುತ್ತಾನೆ, ಸೌತ್ ಇಂಡಿಯನ್ ಸ್ಟಾರ್ ಆಗಿ ಮೆರೆಯುತ್ತಾನೆ. ಆತನ ಈ ಹಾದಿ ಹೇಗಿರುತ್ತದೆ. ಲಾಜಿಕ್ ಹುಡುಕುವ ಆತ ಸಿನಿಮಾದಲ್ಲಿ ಹೇಗೆ ವರ್ತಿಸುತ್ತಾನೆ ಎಂಬ ಅಂಶ ಸೇರಿದಂತೆ ಅನೇಕ ವಿಚಾರಗಳನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುವುದು ನರೇಶ್ ಮಾತು.
ಚಿತ್ರದಲ್ಲಿ ಸಾರ್ಥಕ್ ಎನ್ನುವವರು ಹೀರೋ ಆಗಿ ನಟಿಸಿದ್ದಾರೆ. ಉಳಿದಂತೆ ಊರ್ವಶಿ, ಕಾಶಿಮಾ ನಾಯಕಿಯರು. ಚಿತ್ರದಲ್ಲಿ ಯೋಗರಾಜ್ ಭಟ್ ನಟಿಸಿದ್ದಾರೆ. ಹಾಗಂತ ಯಾವುದೇ ಪಾತ್ರವಾಗಿಯಲ್ಲ, ಯೋಗರಾಜ್ ಭಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿಜಯ್ ಚೆಂಡೂರು, ಅಮಿತ್ ಸೇರಿದಂತೆ ಇತರರು ಬಣ್ಣ ಹಚ್ಚಿದ್ದಾರೆ