Advertisement
ಅಷ್ಟಕ್ಕೂ ಈ ಭಯ, ಉರಿ, ವ್ಯಂಗ್ಯದ ಮಾತುಗಳಿಗೆ ಕಾರಣವೇನೆಂದು ನೀವು ಕೇಳಿದರೆ ಅದಕ್ಕೆ ಸಿಗುವ ಉತ್ತರ ಸೌತ್ ಸಿನಿಮಾಗಳ ಭರ್ಜರಿ ಗೆಲುವು. ದಕ್ಷಿಣ ಭಾರತೀಯ ಚಿತ್ರರಂಗಗಳಿಂದ ತಯಾರಾಗುತ್ತಿರುವ ಸಿನಿಮಾಗಳು ಈಗ ಎಲ್ಲಾ ಕಡೆ ತಲುಪುತ್ತಿವೆ. ಅದರಲ್ಲೂ ಬಾಲಿವುಡ್ ಸಿನಿಮಾಗಳ ಭದ್ರ ಕೋಟೆಯಾಗಿದ್ದ ಉತ್ತರ ಭಾರತದಲ್ಲಿ ಸೌತ್ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಳ್ಳುತ್ತಿವೆ. ಇದು ಬಾಲಿವುಡ್ ಮಂದಿಯ ಉರಿಗೆ ಕಾರಣವಾಗಿದೆ. ಅದನ್ನು ಮಾತಿನ ಮೂಲಕ, ಟಾಂಗ್ ಕೊಡುವ ಮೂಲಕ ಅಲ್ಲಿನ ನಟರು ಹೊರ ಹಾಕುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ:‘ಶೋಕಿವಾಲ’ನ ಕಲರ್ ಫುಲ್ ಎಂಟ್ರಿ
ಆ ತರಹದ ಒಂದಷ್ಟು ಸಿನಿಮಾಗಳನ್ನು ಉದಾಹರಿಸೋದಾದರೆ “ಪುಷ್ಪ’, “ಆರ್‌ಆರ್‌ಆರ್’, “ಕೆಜಿಎಫ್-2′ . ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ಸಿನಿಮಾಗಳು ಬಾಲಿವುಡ್ ಸಿನಿಮಾಗಳು ಮಾಡಿದ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿವೆ. ಇವೆಲ್ಲವನ್ನು ಬಾಲಿವುಡ್ ಮಂದಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
ಸೌತ್ ರೀಮೇಕ್‌ನಲ್ಲಿ ಬಾಲಿವುಡ್ ಮುಂದು
ದಕ್ಷಿಣ ಭಾರತೀಯ ಸಿನಿಮಾದ ಬಗ್ಗೆ ಹಗುರವಾಗಿ ಮಾತನಾಡುವ ಬಾಲಿವುಡ್, ಇಲ್ಲಿ ಹಿಟ್ ಆದ ಸಿನಿಮಾಗಳನ್ನು ರೀಮೇಕ್ ಮಾಡುವಲ್ಲಿ ಸಿಕ್ಕಾಪಟ್ಟೆ ಆಸಕ್ತಿ ತೋರಿಸುತ್ತಿದೆ. ದಕ್ಷಿಣದಲ್ಲಿ ಭಾರತದಲ್ಲಿ ಹಿಟ್ ಆದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ, ಅದೆಷ್ಟೋ ಅಲ್ಲಿನ ನಟರು ತಮ್ಮ ಸಿನಿಕೆರಿಯರ್‌ನಲ್ಲಿ ಮರುಜೀವ ಪಡೆದುಕೊಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಾಲಿವುಡ್, ದಕ್ಷಿಣ ಭಾರತದ 4 ಪ್ರಮುಖ ಭಾಷೆಗಳ ಶೇ 65ಕ್ಕೂ ಹೆಚ್ಚು ಚಿತ್ರಗಳನ್ನು ರೀಮೇಕ್ ಮಾಡಿದೆ.
ರವಿಪ್ರಕಾಶ್ ರೈ