Advertisement

ಟಿ20 ಇತಿಹಾಸದ ವೇಗದ ಶತಕ: ಮಿಲ್ಲರ್‌ ವಿಶ್ವದಾಖಲೆ

06:10 AM Oct 30, 2017 | Team Udayavani |

ಪೊಚೆಫ್ಸೂóಮ್‌ (ದ.ಆಫ್ರಿಕಾ): ದಕ್ಷಿಣ ಆಫ್ರಿಕಾದ ಖ್ಯಾತ ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ವಿಶ್ವದಾಖಲೆಯ ಶತಕ ಸಿಡಿಸಿದ್ದಾರೆ. 

Advertisement

ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅವರು ಟಿ20 ಇತಿಹಾಸದಲ್ಲೇ ಅತಿವೇಗದ ಶತಕ ಬಾರಿಸಿದ್ದಾರೆ. ಶತಕ ಬಾರಿಸಲು ಅವರು ತೆಗೆದುಕೊಂಡ ಎಸೆತಗಳು ಕೇವಲ 35! ಇದಕ್ಕೂ ಮೊದಲು ಆಫ್ರಿಕಾದವರೇ ಇನ್ನೊಬ್ಬ ಬ್ಯಾಟ್ಸ್‌ಮನ್‌ ರಿಚರ್ಡ್‌ ಲೆವಿ ನ್ಯೂಜಿಲೆಂಡ್‌ನ‌ಲ್ಲಿ 45 ಎಸೆತದಲ್ಲಿ ಶತಕ ಬಾರಿಸಿದ್ದು ದಾಖಲೆಯಾಗಿತ್ತು. ಮಿಲ್ಲರ್‌ ಅವರು ಈ ಪಂದ್ಯದಲ್ಲಿ ಎಷ್ಟು ಸ್ಫೋಟಕವಾಗಿದ್ದರೆಂದರೆ ಬಾಂಗ್ಲಾ ಬೌಲರ್‌ಗಳು ಅಕ್ಷರಶಃ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ 19ನೇ ಓವರ್‌ ಎಸೆದ ಮೊಹಮ್ಮದ್‌ ಸೈಫ‌ುದ್ದೀನ್‌ ಪರಿಸ್ಥಿತಿ ಹೀನಾಯವಾಗಿತ್ತು. ಆ ಓವರ್‌ನಲ್ಲಿ ಅವರು ಸತತ 5 ಸಿಕ್ಸರ್‌ ಬಾರಿಸಿ ದಿಢೀರನೆ 88 ರನ್‌ಗೆàರಿದರು. ಕೊನೆಯ ಓವರ್‌ನಲ್ಲಿ ಮತ್ತೆ ಆರ್ಭಟಿಸಿದ ಅವರು ವಿಶ್ವದಾಖಲೆ ನಿರ್ಮಿಸಿದರು. ಅವರ ಈ ಸ್ಫೋಟದಿಂದ ನ್ಯೂಜಿಲೆಂಡ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 224 ರನ್‌ ಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next