Advertisement
ಸಂಧಿಕಾಲ ಅಂತ ಒಂದಿರುತ್ತದೆ. ಅದನ್ನು ನಿರ್ಣಾಯಕ ಹಂತ ಅಂತಲೂ ಕರೆಯಬಹುದು. ಭಾರತೀಯರು ಸಂಧ್ಯಾವಂದನೆ ಮಾಡುವಾಗ ಬೆಳಗ್ಗೆ ಸೂರ್ಯೋದಯ, ನಡು ಮಧ್ಯಾಹ್ನ, ಸಂಜೆ ಸೂರ್ಯಾಸ್ತದ ವೇಳೆಯ ನಿಖರ ಸಮಯವನ್ನು ಗಮನಿಸುತ್ತಾರೆ. ಕಾರಣ ಇದು ಪರಿಸರದಲ್ಲಿ ಬೆಳಕು ವ್ಯತ್ಯಾಸವಾಗುವ ಪರ್ವಕಾಲ. ಹಾಗೆಯೇ ಒಂದು ಜಗತ್ತಿಗೆ, ಒಂದು ದೇಶಕ್ಕೆ, ಒಬ್ಬ ವ್ಯಕ್ತಿಗೂ ಸಂಧಿಕಾಲವಿರುತ್ತದೆ. ಇವರೆಲ್ಲರಿಗೂ ನಿರ್ಣಾಯಕ ಕಾಲಘಟ್ಟವಿರುವಾಗ ಅದು ಒಂದು ಕ್ರಿಕೆಟ್ ತಂಡಕ್ಕೂ ಇರುವುದು ಸಹಜ ತಾನೇ? ದ.ಆಫ್ರಿಕಾ ಕ್ರಿಕೆಟ್ ತಂಡ ಇಂತಹ ನಿರ್ಣಾಯಕ ಕಾಲಘಟ್ಟಕ್ಕೆ ಸಿಲುಕಿಕೊಂಡು ಒದ್ದಾಡುತ್ತಿದೆ. ಇದಕ್ಕೆ ಕಾರಣ ದ.ಆಫ್ರಿಕಾ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್, ಹಾಶಿಮ್ ಆಮ್ಲ ಅವರ ನಿವೃತ್ತಿ ಹಾಗೂ ಇನ್ನೊಬ್ಬ ಶ್ರೇಷ್ಠ ಆಟಗಾರ, ವೇಗಿ ಡೇಲ್‌ಸ್ಟೇನ್ ನಿವೃತ್ತಿಯ ಅಂಚಿಗೆ ತಲುಪಿರುವುದು (ಟೆಸ್ಟ್‌ಗೆ ಈಗಾಗಲೇ ನಿವೃತ್ತಿ ಹೇಳಿದ್ದಾರೆ).
Related Articles
ವರ್ಣಭೇದ ನಿಷೇಧ-1970
ವಿಶ್ವಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲೊಂದೆಂಬ ಹೆಗ್ಗಳಿಕೆ ಹೊಂದಿದ್ದ ದ.ಆಫ್ರಿಕಾವನ್ನು 1970ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ನಿಷೇಧಿಸಿತ್ತು. ಅಲ್ಲಿನ ಕರಿಯರ ವಿರುದ್ಧ ವರ್ಣಭೇದ ತಾರತಮ್ಯವನ್ನು ಗಂಭೀರವಾಗಿ ಪರಿಗಣಿಸಿ ದೀರ್ಘಕಾಲ ದ.ಆಫ್ರಿಕಾವನ್ನು ಕ್ರಿಕೆಟ್‌ನಿಂದ ಹೊರಹಾಕಲಾಗಿತ್ತು. 1991ರಲ್ಲಿ ಈ ದುರ್ದಮ್ಯ ಪರಿಸ್ಥಿತಿಯಿಂದ ದ.ಆಫ್ರಿಕಾ ತಂಡ ಮುಕ್ತಿ ಪಡೆಯಿತು. ಅನಂತರ ಅಲ್ಲಿ ಅಲನ್ ಡೊನಾಲ್ಡ್, ಮಖಾಯ ಎನ್‌ಟಿನಿ, ಗ್ಯಾರಿಕರ್ಸ್ಟನ್, ಹರ್ಷಲ್ ಗಿಬ್ಸ್, ಜಾಕಸ್ ಕಾಲಿಸ್, ಲ್ಯಾನ್ಸ್ ಕ್ಲೂಸ್ನರ್‌ರಂತಹ ವಿಶ್ವಶ್ರೇಷ್ಠರು ಕಾಣಿಸಿಕೊಂಡರು. ಅದು ಮತ್ತೂಮ್ಮೆ ಬಲಿಷ್ಠತಂಡವಾಯಿತು.
Advertisement
ಮ್ಯಾಚ್‌ಫಿಕ್ಸಿಂಗ್, ಕ್ರೋನ್ಯೆಗೆ ನಿಷೇಧ-2000ದ.ಆಫ್ರಿಕಾ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕ ಹ್ಯಾನ್ಸಿ ಕ್ರೋನ್ಯೆ ಅವರದ್ದು ಒಂದು ದುರಂತ ಬದುಕು. ನಾಯಕನಾಗಿ ಅದ್ಭುತ ಯಶಸ್ಸು ಕಂಡ ಅವರು, ದ.ಆಫ್ರಿಕಾವನ್ನು ಯಾವುದೇ ತಂಡದೆದುರು ಗೆಲ್ಲಬಲ್ಲ ರೀತಿಯಲ್ಲಿ ರೂಪಿಸಿದ್ದರು. ನಾಯಕನಾಗಿದ್ದ 53 ಟೆಸ್ಟ್‌ಗಳಲ್ಲಿ 27 ಬಾರಿ ತಂಡವನ್ನು ಗೆಲ್ಲಿಸಿದ್ದರು, ಸೋತಿದ್ದು 11 ಬಾರಿ ಮಾತ್ರ. 138 ಏಕದಿನ ಪಂದ್ಯಗಳಲ್ಲಿ 99 ಬಾರಿ ಗೆಲುವು ಸಾಧಿಸಿದ್ದರು. ಆ ಕಾಲದಲ್ಲಿ ನಾಯಕನೆಂದರೆ ಹ್ಯಾನ್ಸಿ ಕ್ರೋನ್ಯೆ ಅನ್ನುವ ಮಟ್ಟಕ್ಕೆ ಜನಜನಿತವಾಗಿತ್ತು. ಅಂತಹ ಸುಂದರವೇಳೆಯಲ್ಲಿ ಮ್ಯಾಚ್‌ಫಿಕ್ಸಿಂಗ್ ನಡೆಸಿದ ಆರೋಪ ಸಾಬೀತಾಯಿತು. 2000ನೇ ವರ್ಷದಲ್ಲಿ ಕ್ರೋನ್ಯೆ ಆಜೀವ ನಿಷೇಧಕ್ಕೊಳಗಾದರು. ಮುಂದಿನವರ್ಷ ವಿಮಾನಾಪಘಾತದಲ್ಲಿ ತೀರಿಕೊಂಡರು. ಇಲ್ಲಿಗೆ ದ.ಆಫ್ರಿಕಾ ತಂಡದ ಸುಂದರ ಅಧ್ಯಾಯವೊಂದು ಮುಕ್ತಾಯವಾಯಿತು. ಕ್ರೋನ್ಯೆಯೊಂದಿಗೆ ಇನ್ನೊಬ್ಬ ಖ್ಯಾತ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್, ಸ್ಪಿನ್ನರ್ ನಿಕಿ ಬೋಯೆ, ಪೀಟರ್ ಸ್ಟ್ರೈಡಮ್ ಕೂಡ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದ್ದರು. ತಂಡ ದಿಢೀರ್ ಒತ್ತಡಕ್ಕೆ ಸಿಲುಕಿತು. ಇಂತಹ ಇಕ್ಕಟ್ಟಿನ ಹೊತ್ತಿನಲ್ಲಿ ತಂಡದ ನೊಗವನ್ನು ಹೊರಬೇಕಾದ ಅನಿವಾರ್ಯತೆ ವೇಗ್ ಶಾನ್ ಪೊಲಾಕ್ ಹೆಗಲಿಗೇರಿತು. ಲಂಕಾ, ಆಸ್ಟ್ರೇಲಿಯದ ಮಹಾಕುಸಿತ
ವಿಶ್ವಕ್ರಿಕೆಟ್‌ನಲ್ಲಿ ದ.ಆಫ್ರಿಕಾದ ಮಾದರಿಯಲ್ಲೇ ಕುಸಿತ ಅನುಭವಿಸಿದ ಇನ್ನೆರಡು ತಂಡ ಶ್ರೀಲಂಕಾ ಹಾಗೂ ಆಸ್ಟ್ರೇಲಿಯ. 1996ರಲ್ಲಿ ವಿಶ್ವಕಪ್ ಗೆದ್ದು ಮತ್ತೆ ಮೂರು ಬಾರಿ ಫೈನಲ್‌ಗೇರಿದ್ದ ಶ್ರೀಲಂಕಾ 2011ರ ವಿಶ್ವಕಪ್‌ವರೆಗೆ ಬಲಿಷ್ಠವಾಗಿಯೇ ಇತ್ತು. 2015ರ ವಿಶ್ವಕಪ್ ನಂತರ ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ ಇನ್ನಿತರ ತಾರೆಯರು ನಿವೃತ್ತಿಯಾದರು. ಈ ಖ್ಯಾತನಾಮರ ನಿವೃತ್ತಿಯಿಂದ ಉಂಟಾದ ಖಾಲಿತನವನ್ನು ತುಂಬಲು ಸಾಧ್ಯವೇ ಆಗಲಿಲ್ಲ. ಪರಿಣಾಮ ಆ ತಂಡ ಸಂಪೂರ್ಣ ಕುಸಿದುಹೋಗಿದೆ. 2007ರ ವಿಶ್ವಕಪ್ ನಂತರ ಆಸ್ಟ್ರೇಲಿಯ ತಂಡದ ದಿಗ್ಗಜರು ಒಬ್ಬೊಬ್ಬರೇ ನಿವೃತ್ತಿಯಾಗಲು ಆರಂಭವಾಯಿತು. ಗ್ಲೆನ್ ಮೆಕ್‌ಗ್ರಾತ್, ಮ್ಯಾಥ್ಯೂ ಹೇಡನ್, 2011ರ ಅನಂತರ ರಿಕಿ ಪಾಂಟಿಂಗ್ ಹೀಗೆ ಒಬ್ಬೊಬ್ಬರೇ ಹೊರನಡೆದರು. ಕಳೆದ ವರ್ಷ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ನಿಷೇಧದ ನಂತರ ಪೂರ್ಣಪ್ರಮಾಣದಲ್ಲಿ ಬಿದ್ದುಹೋಗಿತ್ತು.