Advertisement

ಕಾಕ್‌, ಆಮ್ಲ ಶತಕ: ದಕ್ಷಿಣ ಆಫ್ರಿಕಾ 10 ವಿಕೆಟ್‌ ಜಯಭೇರಿ

01:11 PM Oct 16, 2017 | Team Udayavani |

ಕಿಂಬರ್ಲಿ: ಆರಂಭಿಕ ಆಟಗಾರರಾದ ಕ್ವಿಂಟನ್‌ ಡಿ ಕಾಕ್‌ ಮತ್ತು ಹಾಶಿಮ್‌ ಆಮ್ಲ ಅವರ ಆಕರ್ಷಕ ಶತಕ ಮತ್ತು ಅವರಿಬ್ಬರು ಮುರಿಯದ ಮೊದಲ ವಿಕೆಟಿಗೆ ಸೇರಿಸಿದ 282 ರನ್ನುಗಳ ಜತೆಯಾಟದಿಂದಾಗಿ ದಕ್ಷಿಣ ಆಫ್ರಿಕಾವು ಪ್ರವಾಸಿ ಬಾಂಗ್ಲಾದೇಶ ತಂಡದೆದುರಿನ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. 

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶವು 7 ವಿಕೆಟಿಗೆ 278 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಬಾಂಗ್ಲಾ ದಾಳಿಯನ್ನು ಪುಡಿಗಟ್ಟಿದ ಕಾಕ್‌ ಮತ್ತು ಆಮ್ಲ ಬೌಂಡರಿಗಳ ಸುರಿಮಳೆ ಸುರಿದು 42.5 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ತಂಡಕ್ಕೆ ಜಯ ತಂದುಕೊಟ್ಟರು. 

ಮುರಿಯದ ಮೊದಲ ವಿಕೆಟಿಗೆ ಕಾಕ್‌ ಮತ್ತು ಆಮ್ಲ ಅವರು 282 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಕಾಕ್‌ 145 ಎಸೆತ ಎದುರಿಸಿ 168 ರನ್‌ ಸಿಡಿಸಿದರು. 21 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು. ಕಾಕ್‌ಗೆ ಉತ್ತಮ ಬೆಂಬಲ ನೀಡಿದ ಆಮ್ಲ 112 ಎಸೆತಗಳಿಂದ 110 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

Udayavani is now on Telegram. Click here to join our channel and stay updated with the latest news.

Next