Advertisement

T20 ; ಸೂರ್ಯಕುಮಾರ್ ಅಮೋಘ ಶತಕ:ದಕ್ಷಿಣ ಆಫ್ರಿಕಾಕ್ಕೆ 202 ರನ್ ಗಳ ಸವಾಲು

10:17 PM Dec 14, 2023 | Team Udayavani |

ಜೋಹಾನ್ಸ್‌ಬರ್ಗ್ : ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸಮಬಲ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವ ಟಿ 20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅಮೋಘ ಶತಕ ಸಿಡಿಸಿದ್ದಾರೆ.

Advertisement

20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ 202 ರನ್ ಗಳ ಸವಾಲು ದಕ್ಷಿಣ ಆಫ್ರಿಕಾದ ಎದುರಿಗಿಟ್ಟಿದೆ.

ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್ 60(41ಎಸೆತ) ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 12, ತಿಲಕ್ ವರ್ಮ ಶೂನ್ಯಕ್ಕೆ ಔಟಾದರು. ಅಮೋಘ ಆಟವಾಡಿ ಅಬ್ಬರಿಸಿದ ಸೂರ್ಯ 56 ಎಸೆತಗಳಲ್ಲಿ100 ರನ್ ಪೂರ್ಣ ಗಳಿಸಿ ಔಟಾದರು. 7 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಸಿಡಿಸಿದರು. ರಿಂಕು ಸಿಂಗ್ 14 ರನ್ ಗಳಿಸಿ ಔಟಾದರು.

ಕೇಶವ ಮಹಾರಾಜ್ ಮತ್ತು ಲಿಜಾಡ್ ವಿಲಿಯಮ್ಸ್ ತಲಾ 2 ವಿಕೆಟ್ ಪಡೆದರು. ನಾಂದ್ರೆ ಬರ್ಗರ್,ತಬ್ರೈಜ್ ಶಮ್ಸಿ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next