ಕೇಪ್ ಟೌನ್ : ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಸರಣಿಯ ಬುಧವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲೇ ಭಾರತ ಬೌಲಿಂಗ್ ದಾಳಿ ನಡೆಸಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಅಗ್ಗದ 55 ರನ್ ಗಳಿಗೆ ಆಲೌಟ್ ಮಾಡಿದೆ. ಬಿಗಿ ಬೌಲಿಂಗ್ ದಾಳಿ ನಡೆಸಿದ ಮೊಹಮದ್ ಸಿರಾಜ್ 6 ವಿಕೆಟ್ ಕಿತ್ತು ಹರಿಣಗಳ ಪಾಲಿಗೆ ಘಾತಕವಾಗಿ ಪರಿಣಮಿಸಿದರು.
ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು . ಬಿಗಿ ದಾಳಿಯನ್ನು ಎದುರಿಸಲಾಗದೆ ಕಂಗಾಲಾಯಿತು. 34 ರನ್ ಆಗುವಷ್ಟರಲ್ಲೇ 5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಪೆವಿಲಿಯನ್ ಪರೇಡ್ ನಡುವೆ ಬೆಡಿಂಗ್ಹ್ಯಾಮ್ 12 ರನ್ ಮತ್ತು ವಿಕೆಟ್ ಕೀಪರ್ ವೆರ್ರೆನ್ನೆ 15 ರನ್ ಮಾತ್ರ ಗರಿಷ್ಠ ಸ್ಕೋರ್.
9 ಓವರ್ ಎಸೆದ ಸಿರಾಜ್ 3 ಮೇಡನ್ ಓವರ್ 15 ರನ್ ಮಾತ್ರ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದರು. ಬುಮ್ರಾ ಮತ್ತು ಮುಕೇಶ್ ಕುಮಾರ್ 2 ವಿಕೆಟ್ ಕಿತ್ತರು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 11 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ. ರೋಹಿತ್ ಶರ್ಮ 39 ರನ್ ಗಳಿಸಿದ್ದಾರೆ. ಶುಭಮನ್ ಗಿಲ್ 1000 ಟೆಸ್ಟ್ ರನ್ ಪೂರ್ತಿಗೊಳಿಸಿ ಆಟವಾಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಟೆಸ್ಟ್ ನ ಅತೀ ಕಡಿಮೆ ಆಲ್ ಔಟ್ ಮೊತ್ತವಾಗಿದೆ. ಟೆಸ್ಟ್‌ನಲ್ಲಿ ಭಾರತದ ವಿರುದ್ಧ ತಂಡವೊಂದರ ಅತಿ ಕಡಿಮೆ ಆಲ್ ಔಟ್ ಮೊತ್ತ ಇದಾಗಿದೆ. ನ್ಯೂಜಿಲ್ಯಾಂಡ್ ತಂಡ ಮುಂಬೈ ನಲ್ಲಿ 2021 ರಲ್ಲಿ 62 ರನ್ ಗಳಿಗೆ ಆಲೌಟಾಗಿತ್ತು.