Advertisement
ಗೆಲ್ಲಲು 430 ರನ್ ಗಳಿಸುವ ಗುರಿ ಪಡೆದ ಆಸ್ಟ್ರೇಲಿಯ ತಂಡವು ಮಾರ್ನೆ ಮಾರ್ಕೆಲ್ ದಾಳಿಗೆ ತತ್ತರಿಸಿತು. ಪಂದ್ಯದ ನಾಲ್ಕನೇ ದಿನವೇ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 107 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೊದಲು 5 ವಿಕೆಟಿಗೆ 238 ರನ್ನುಗಳಿಂದ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 373 ರನ್ ಗಳಿಸಿ ಆಲೌಟಾಯಿತು. ಮಾರ್ಕ್‌ರಮ್ 84, ಡಿ’ವಿಲಿಯರ್ 63, ಕಾಕ್ 65 ಮತ್ತು ವರ್ನನ್ ಫಿಲಾಂಡರ್ 52 ರನ್ ಗಳಿಸಿ ಅಜೇಯರಾಗಿ ಉಳಿದರು.
ಮಾರಕ ದಾಳಿ ಸಂಘಟಿಸಿದ ಮಾರ್ನೆ ಮಾರ್ಕೆಲ್ ತನ್ನ 9.4 ಓವರ್‌ಗಳ ದಾಳಿಯಲ್ಲಿ ಕೇವಲ 23 ರನ್ ನೀಡಿ 5 ವಿಕೆಟ್ ಉರುಳಿಸಿದರು. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸ್ಟೀವನ್ ಸ್ಮಿತ್‌ಗೆ ಐಸಿಸಿ ಒಂದು ಪಂದ್ಯ ನಿಷೇಧ ಹೇರಿದೆ. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ. ಈ ಟೆಸ್ಟ್ ಜೊಹಾನ್ಸ್‌ಬರ್ಗ್ ನಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಆಸ್ಟ್ರೇಲಿಯದ ಪ್ರಧಾನಮಂತ್ರಿ ಸಹಿತ ಕ್ರಿಕೆಟ್ ವಿಶ್ವ ಟೀಕಿಸಿದೆ.
Related Articles
Advertisement
ಸಂಕ್ಷಿಪ್ತ ಸ್ಕೋರು ದಕ್ಷಿಣ ಆಫ್ರಿಕಾ 311 ಮತ್ತು 373 (ಮಾರ್ಕ್‌ರಮ್ 84, ಡಿ’ವಿಲಿಯರ್ 63, ಕಾಕ್ 65, ಫಿಲಾಂಡರ್ 52 ಔಟಾಗದೆ, ಹ್ಯಾಝೆಲ್‌ವುಡ್ 69ಕ್ಕೆ 3, ಕಮಿನ್ಸ್ 67ಕ್ಕೆ 3, ನಥನ್ ಲಿಯೋನ್ 102ಕ್ಕೆ 3); ಆಸ್ಟ್ರೇಲಿಯ 255 ಮತ್ತು 107 (ಬ್ಯಾನ್‌ಕ್ರಾಫ್ಟ್ 26, ವಾರ್ನರ್ 32, ಶಾನ್ ಮಾರ್ಷ್ 16, ಮಾರ್ಕೆಲ್ 23ಕ್ಕೆ 5, ಕೇಶವ ಮಹಾರಾಜ್ 32ಕ್ಕೆ 2).