Advertisement

World Cup: ದ.ಆಫ್ರಿಕಾ vs ಆಸೀಸ್ 2nd ಸೆಮಿ ಫೈಟ್‌; ಟಾಸ್‌ ಗೆದ್ದ ಬವುಮ ಪಡೆ

01:35 PM Nov 16, 2023 | Team Udayavani |

ಕೋಲ್ಕತಾ: ಕ್ರಿಕೆಟ್‌ ವಿಶ್ವಕಪ್‌ 2ನೇ ಸೆಮಿಪೈನಲ್‌ಗೆ ಈಡನ್‌ ಗಾರ್ಡನ್‌ ಸಜ್ಜಾಗಿದೆ. ಆಸೀಸ್ ಸವಾಲಿಗೆ ಹರಿಣಗಳ ಬಲಿಷ್ಠ ತಂಡ ಜಿದ್ದಾಜಿದ್ದಿಗೆ ರೆಡಿಯಾಗಿದೆ. ಟಾಸ್‌ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡಿದೆ.

Advertisement

ಕ್ರಿಕೆಟ್‌ ವಿಶ್ವಕಪ್‌ ಇತಿಹಾಸದಲ್ಲಿ ದ.ಆಫ್ರಿಕಾ ಈವರೆಗೆ 4 ಸಲ ಸೆಮಿಫೈನಲ್‌ ಪ್ರವೇಶಿಸಿದರೂ ಒಮ್ಮೆಯೂ ಫೈನಲ್‌ಗೆ ಹೆಜ್ಜೆ ಇಡದ ನತದೃಷ್ಟ ತಂಡವಾಗಿ ಗುರುತಿಸಿಕೊಂಡಿದೆ. ಇದೀಗ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಗುರುವಾರ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ಟೆಂಬ ಬವುಮ ಪಡೆಯ ಎದುರಾಳಿ 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಎನ್ನುವುದು ಗಮನಿಸಬೇಕಾದ ಅಂಶ.

ವಿಶ್ವಕಪ್‌ ಟೂರ್ನಿಯಲ್ಲಿ ದ.ಆಫ್ರಿಕಾ ಟೇಬಲ್‌ ಟಾಪರ್‌ ಹಾಗೂ ಎರಡನೇ ಸ್ಥಾನದಲ್ಲೇ ಇತ್ತು. ಇತ್ತ ಆಸೀಸ್‌ ಹಾವು – ಏಣಿಯಂತೆ ಬಂದು ಸೆಮಿಫೈನಲ್‌ ಗೇರಿದೆ.

ದ.ಆಫ್ರಿಕಾಕ್ಕೆ ಬ್ಯಾಟಿಂಗ್‌ ಬಲ: ಈ ಬಾರಿಯ ವಿಶ್ವಕಪ್‌ ನಲ್ಲಿ ದ.ಆಫ್ರಿಕಾ ಬ್ಯಾಟಿಂಗ್‌ ನಲ್ಲೇ ಸದ್ದು ಮಾಡಿದೆ. ಇವರೆಗೆ 6 ಸಲಿ 300 ಕ್ಕೂ ಅಧಿಕ ಮೊತ್ತವನ್ನು ದಾಖಲಿಸಿದೆ. ಅಗ್ರ ಆರರಲ್ಲಿ ನಾಲ್ವರು ಈಗಾಗಲೇ ಸೆಂಚುರಿ ಬಾರಿಸಿದ್ದಾರೆ. ಕ್ವಿಂಟನ್‌ ಡಿ ಕಾಕ್‌ ಅವರದಂತೂ ಜೀವಮಾನದ ಫಾರ್ಮ್. 4 ಶತಕ ಬಾರಿಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಈ ಕೂಟದಲ್ಲಿ ಬಾರಿಸಿದ ಒಟ್ಟು ರನ್‌ 591. ರಸ್ಸಿ ವಾನ್‌ ಡರ್‌ ಡುಸೆನ್‌ ನಂ.3ಕ್ಕೆ ಪರ್ಫೆಕ್ಟ್ ಬ್ಯಾಟರ್‌. ಮಾರ್ಕ್‌ರಮ್‌, ಕ್ಲಾಸೆನ್‌, ಮಿಲ್ಲರ್‌ ಕೂಡ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ.

ದ.ಆಫ್ರಿಕಾ ವಿಶ್ವಕಪ್‌ ಇತಿಹಾಸದ ಗರಿಷ್ಠ ರನ್‌ (5ಕ್ಕೆ 428) ಬಾರಿಸಿದ ದಾಖಲೆಗೂ ಭಾಜನವಾಗಿದೆ. ಹಾಗೆಯೇ ಭಾರತದ ವಿರುದ್ಧ ಬರೀ 83 ರನ್ನಿಗೆ ಉದುರಿದ ಕಂಟಕವನ್ನೂ ಹೊಂದಿದೆ. ಇದು ದಾಖಲಾದದ್ದು “ಈಡನ್‌ ಗಾರ್ಡನ್ಸ್‌’ನಲ್ಲೇ ಎಂಬುದನ್ನು ಮರೆಯುವಂತಿಲ್ಲ!

Advertisement

ಜಾನ್ಸೆನ್‌, ಎನ್‌ಗಿಡಿ, ರಬಾಡ, ಮಹಾರಾಜ್‌, ಶಮ್ಸಿ, ಲಿಝಾಡ್‌, ಫೆಲುಕ್ವಾಯೊ ಅವರೆಲ್ಲ ದಕ್ಷಿಣ ಆಫ್ರಿಕಾ ಬೌಲಿಂಗ್‌ ಸರದಿಯ ಕಟ್ಟಾಳುಗಳು.

ಆಸ್ಟ್ರೇಲಿಯ ಪರಿಪೂರ್ಣ ತಂಡ:

ಆಸ್ಟ್ರೇಲಿಯ ಯಾವ ಸ್ಥಿತಿಯಲ್ಲೂ ಮೇಲೆದ್ದು ಬರಬಲ್ಲ ತಂಡ. ಫ‌ಸ್ಟ್‌ ಬ್ಯಾಟಿಂಗ್‌, ಚೇಸಿಂಗ್‌… ಯಾವುದೂ ಸಮಸ್ಯೆ ಅಲ್ಲ. ಅಫ್ಘಾನಿಸ್ಥಾನ ವಿರುದ್ಧದ ಸ್ಟೋರಿ ಇದಕ್ಕೊಂದು ತಾಜಾ ಉದಾಹರಣೆ. ವಾರ್ನರ್‌, ಹೆಡ್‌, ಮಾರ್ಷ್‌, ಲಬುಶೇನ್‌, ಸ್ಮಿತ್‌, ಮ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌ ಅವರನ್ನೊಳಗೊಂಡ ಕಾಂಗರೂ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠ ಹಾಗೂ ಆಕರ್ಷಕ.

ವಾರ್ನರ್‌ ಬ್ಯಾಕ್‌ ಟು ಬ್ಯಾಕ್‌ ಸೆಂಚುರಿ, ಮ್ಯಾಕ್ಸ್‌ವೆಲ್‌ ಅವರ ಪ್ರಚಂಡ ದ್ವಿಶತಕ, ಹಿಂದಿನ ಪಂದ್ಯದಲ್ಲಿ ಮಾರ್ಷ್‌ ಬಾರಿಸಿದ ಅಜೇಯ 177, ಚೊಚ್ಚಲ ವಿಶ್ವಕಪ್‌ ಪಂದ್ಯದಲ್ಲೇ ಹೆಡ್‌ ಸಿಡಿಸಿದ ಸೆಂಚುರಿಯೆಲ್ಲ ಆಸೀಸ್‌ ಬ್ಯಾಟಿಂಗ್‌ ಸರದಿಯ ಹೈಲೈಟ್ಸ್‌. ಬೌಲಿಂಗ್‌ನಲ್ಲಿ ಸ್ಪಿನ್‌ ಸ್ಪೆಷಲಿಸ್ಟ್‌ ಆ್ಯಡಂ ಝಂಪ ಟ್ರಂಪ್‌ಕಾರ್ಡ್‌ ಆಗಿದ್ದಾರೆ.

ತಂಡಗಳು: 

ಆಸ್ಟ್ರೇಲಿಯ:  ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ದ.ಆಫ್ರಿಕಾ:‌ 

ಕ್ವಿಂಟನ್ ಡಿ ಕಾಕ್(ಕೀಪರ್), ಟೆಂಬಾ ಬವುಮಾ(ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ

Advertisement

Udayavani is now on Telegram. Click here to join our channel and stay updated with the latest news.

Next