Advertisement

ಅಸಭ್ಯ ಭಾಷೆ ಬಳಸಿದ ರಬಾಡಾಗೆ ಟೆಸ್ಟ್‌ ನಿಷೇಧ

03:50 AM Jul 09, 2017 | Team Udayavani |

ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ವೇಳೆ ಅಸಭ್ಯ ಭಾಷೆಯನ್ನಾಡಿದ ದಕ್ಷಿಣ ಆಫ್ರಿಕಾ ವೇಗಿ ಕ್ಯಾಗಿಸೊ ರಬಾಡ ಅವರಿಗೆ ಐಸಿಸಿ ಒಂದು ಟೆಸ್ಟ್‌ ಪಂದ್ಯದ ನಿಷೇಧ ಹೇರಿದೆ. ಜತೆಗೆ ಪಂದ್ಯ ಸಂಭಾವನೆಯ ಶೇ. 15ರಷ್ಟು ದಂಡವನ್ನೂ ವಿಧಿಸಿದೆ.

Advertisement

ಬೆನ್‌ ಸ್ಟೋಕ್ಸ್‌ ವಿಕೆಟ್‌ ಹಾರಿಸಿದ ವೇಳೆ ಕ್ಯಾಗಿಸೊ ರಬಾಡ ಭಾವೋದ್ರೇಕಕ್ಕೊಳಗಾದರು. ಸ್ಟೋಕ್ಸ್‌ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ ಅಸಭ್ಯ ಭಾಷೆ ಬಳಸಿದ್ದಾರೆ. ಇದು ಸ್ಟಂಪ್‌ ಮೈಕ್ರೋಫೋನ್‌ನಲ್ಲಿ ದಾಖಲಾಗಿದೆ. ಇದಕ್ಕಾಗಿ ರಬಾಡ ಅವರಿಗೆ ಒಂದು “ದೋಷಾಂಕ’ (ಡೀಮೆರಿಟ್‌ ಪಾಯಿಂಟ್‌) ವಿಧಿಸಲಾಯಿತು. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ ಕಳೆದ ಫೆಬ್ರವರಿಯಲ್ಲಿ ನಡೆದ ಕೇಪ್‌ಟೌನ್‌ ಏಕದಿನ ಪಂದ್ಯದ ವೇಳೆ ನಿರೋಷನ್‌ ಡಿಕ್ವೆಲ್ಲ ಜಗಳಕ್ಕಿಳಿದ ಕಾರಣಕ್ಕಾಗಿ 3 ದೋಷಾಂಕ ನೀಡಲಾಗಿತ್ತು. ಒಂದೇ ವರ್ಷದ ಅವಧಿಯಲ್ಲಿ ಈ ದೋಷಾಂಕಗಳ ಸಂಖ್ಯೆ 4ಕ್ಕೆ ಏರಿದ್ದರಿಂದ ಐಸಿಸಿ ನಿಯಮದಂತೆ ರಬಾಡ ಒಂದು ಟೆಸ್ಟ್‌ ಪಂದ್ಯದ ನಿಷೇಧಕ್ಕೆ ಒಳಗಾಗಿದ್ದಾರೆ.

ಇದರಿಂದ ಇಂಗ್ಲೆಂಡ್‌ ವಿರುದ್ಧ ಟ್ರೆಂಟ್‌ಬ್ರಿಜ್‌ನಲ್ಲಿ ನಡೆಯುವ 2ನೇ ಟೆಸ್ಟ್‌ ಪಂದ್ಯದಿಂದ ರಬಾಡ ಹೊರಗುಳಿಯಲಿದ್ದಾರೆ.
ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಮೊದಲ ದಿನ 15 ಓವರ್‌ ಎಸೆದರೂ ವಿಕೆಟ್‌ ಕೀಳುವಲ್ಲಿ ವಿಫ‌ಲರಾದ ರಬಾಡ, ಬಳಿಕ ಸ್ಟೋಕ್ಸ್‌ ಅವರ ಬಿಗ್‌ ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಭಾವೋದ್ರೇಕಕ್ಕೊಳಗಾಗಿ “ಎಫ್*** ಆಫ್’ ಎಂದು ಕೆಟ್ಟ ಭಾಷೆಯಲ್ಲಿ ಸ್ಟೋಕ್ಸ್‌ ಅವರನ್ನು ಜರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next