Advertisement

ಎಬಿಡಿಗೆ ದಕ್ಷಿಣ ಆಫ್ರಿಕಾ ತಂಡದ ಬಾಗಿಲು ತೆರೆದಿದೆ: ಗ್ರೇಮ್‌ ಸ್ಮಿತ್‌

10:10 AM Jan 25, 2020 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಎಬಿ ಡಿ ವಿಲಿಯರ್ಸ್ ಪುನರಾಗಮನದ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ನಿರ್ದೇಶಕ ಗ್ರೇಮ್‌ ಸ್ಮಿತ್‌ ತಿಳಿಸಿದ್ದಾರೆ. ಎಬಿಡಿ ಬರುವುದಾದರೆ ಬರಲಿ, ಅವರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ ಎಂದಿದ್ದಾರೆ.

Advertisement

ಇತ್ತೀಚೆಗೆ ಎಬಿಡಿ ನಿವೃತ್ತಿಯಿಂದ ಹೊರಬಂದು ಮತ್ತೆ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಮರಳುವ, ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡುವ ಕುರಿತು ಮುನ್ಸೂಚನೆ ನೀಡಿದ್ದರು. ಇದಕ್ಕೆ ಎಲ್ಲ ದಿಕ್ಕುಗಳಿಂದಲೂ ಸ್ವಾಗತ ಲಭಿಸಿದೆ. ಸದ್ಯ ಎಬಿಡಿ “ಬಿಗ್‌ ಬಾಶ್‌ ಟಿ20 ಕ್ರಿಕೆಟ್‌ ಲೀಗ್‌’ನಲ್ಲಿ ‘ಬ್ರಿಸ್ಬೇನ್‌ ಹೀಟ್ಸ್‌’ ಪರ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next