Advertisement
ಜಾಗತಿಕವಾಗಿ ಸೋಂಕಿನ ಬಿಕ್ಕಟ್ಟಿನ ವಿರುದ್ಧ ಹೋರಾಡುವಲ್ಲಿ ಹಿಂದುಳಿದಿರುವ ದೇಶವಾದ ದಕ್ಷಿಣ ಆಫ್ರಿಕಾ ದೇಶ ಮೂದಲ ಪ್ರಕರಣ ದಾಖಲಾಗಿ ಮೂರು ವಾರಗಳ ನಂತರ ಅಂದರೆ ಮಾರ್ಚ್ 27 ರಂದು ಇಡೀ ದೇಶವನ್ನು ಲಾಕ್‌ಡೌನ್ ಮಾಡಿತ್ತು. ಆದರೂ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೇಶ ವಿಫಲವಾಗಿದೆ.ಇನ್ನು 100 ದಿನಗಳ ಕಾಲ ಲಾಕ್‌ಡೌನ್ ಹಂತವನ್ನು ಪೂರೈಸಿದರ ಕುರಿತು ವೆಸ್ಟರ್ನ್ ಕೇಪ್ ಮುಖ್ಯಮಂತ್ರಿ ಅಲನ್ ವಿಂಡೆ ಅವರು, ದಕ್ಷಿಣ ಆಫ್ರಿಕನ್ನರು ಮುಂದಿನ ಕೆಲವು ಸಮಯದವರೆಗೆ ಸೋಂಕಿನೊಂದಿಗೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ಲಾಕ್‌ಡೌನ್ ನಿವಾಸಿಗಳಿಗೆ ಕಷ್ಟಕರ ಮಾರ್ಗವಾಗಿದ್ದು, ಎದುರಾಗಿರುವ ಈ ಘಟ್ಟವನ್ನು ಎದುರಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ. ಪರಿಸ್ಥಿತಿ ಹೀನಾಯವಾಗಿದ್ದರೂ ದೇಶದಲ್ಲಿ ಮೇ 1 ರಿಂದ ಲಾಕ್‌ಡೌನ್ ನಿಯಮ ಸಡಿಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೋಂಕು ಪ್ರಕರಣ ಹೆಚ್ಚಳಕ್ಕೆ ಲಾಕ್‌ಡೌನ್ ಸಡಿಲಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಇತ್ತ ಆಫ್ರಿಕಾ ಖಂಡದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ರವಿವಾರ ಒಟ್ಟು ಪ್ರಕರಣಗಳ ಸಂಖ್ಯೆ1.87 ಲಕ್ಷಕ್ಕೇರಿದ್ದರೆ, ಒಟ್ಟು ಸಾವಿನ ಸಂಖ್ಯೆಯೂ 3026ಕ್ಕೇರಿದೆ. ಬಡ ರಾಷ್ಟ್ರಗಳಿಗೆ ಸಂಕಷ್ಟ ಜಗತ್ತಿನ ಅತಿ ಬಡ ರಾಷ್ಟ್ರಗಳಾದ ಆಫ್ರಿಕಾದ ಬುರುಂಡಿ ಮತ್ತು ಲೈಬೀರಿಯಾದಲ್ಲೂ ಕೋವಿಡ್ ಅಟ್ಟಹಾಸ ಮೆರೆಯುತ್ತಿದೆ. ಅಲ್ಲಿ ಚಿಕಿತ್ಸೆಗೆ ಜನರಲ್ಲಿ ಹಣವೂ ಇಲ್ಲ, ದೇಶದಲ್ಲಿ ಸರಿಯಾದ ವ್ಯವಸ್ಥೆಯೂ ಇಲ್ಲ ಎಂಬಂತಿದೆ ಪರಿಸ್ಥಿತಿ. ಬುರುಂಡಿಯಲ್ಲಿ 191 ಮಂದಿ ಕೋವಿಡ್ ಸೋಂಕು ತಗುಲಿದ್ದು, ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಬಗ್ಗೆ ಮಾಹಿತಿ ಇಲ್ಲ. ಇನ್ನು ಲೈಬೀರಿಯಾದಲ್ಲಿ 833 ಮಂದಿಗೆ ಸೋಂಕು ತಗುಲಿದ್ದು, 346 ಮಂದಿ ಚೇತರಿಸಿಕೊಂಡಿದ್ದಾರೆ. 37 ಮಂದಿ ಮೃತಪಟ್ಟಿದ್ದಾರೆ.