Advertisement

ಇನ್ನಿಂಗ್ಸಿನ ಎಲ್ಲ 10 ವಿಕೆಟ್‌ ಕೆಡವಿದ ದಕ್ಷಿಣ ಆಫ್ರಿಕಾದ ಸ್ಯಾಮ್‌ ವೈಟ್‌ಹೆಡ್‌

08:54 PM Nov 21, 2021 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸೌತ್‌ ವೆಸ್ಟರ್ನ್ ಡಿಸ್ಟ್ರಿಕ್ಟ್ ತಂಡದ ಸ್ಪಿನ್ನರ್‌ ಸ್ಯಾಮ್‌ ವೈಟ್‌ಹೆಡ್‌ ವಿಶಿಷ್ಟ ಸಾಧನೆಗೈದಿದ್ದಾರೆ. 4 ದಿನಗಳ ಡಿವಿಷನ್‌-2 ಫ್ರಾಂಚೈಸಿ ಸರಣಿಯಲ್ಲಿ ಈಸ್ಟರ್ನ್ ಸ್ಟಾರ್ಮ್ ತಂಡದ ದ್ವಿತೀಯ ಸರದಿಯ ಎಲ್ಲ 10 ವಿಕೆಟ್‌ ಉರುಳಿಸಿ ಮಿಂಚಿದ್ದಾರೆ.

Advertisement

ಸ್ಯಾಮ್‌ ವೈಟ್‌ಹೆಡ್‌ 36 ರನ್ನಿತ್ತು 10 ವಿಕೆಟ್‌ ಉಡಾಯಿಸಿದರು. ಇದರೊಂದಿಗೆ ಅವರ ತಂಡ 120 ರನ್‌ ಜಯಭೇರಿ ಮೊಳಗಿಸಿತು. ಗೆಲುವಿಗೆ 186 ರನ್‌ ಗಳಿಸಬೇಕಿದ್ದ ಈಸ್ಟರ್ನ್ ಸ್ಟಾರ್ಮ್ 65ಕ್ಕೆ ಆಲೌಟ್‌ ಆಯಿತು. ಬ್ಯಾಟಿಂಗ್‌ನಲ್ಲೂ ಮಿಂಚಿದ ವೈಟ್‌ಹೆಡ್‌ ಕ್ರಮವಾಗಿ 66 ಹಾಗೂ 45 ರನ್‌ ಬಾರಿಸಿದ್ದರು.

ಇದನ್ನೂ ಓದಿ:ಚೊಚ್ಚಲ ಪಂದ್ಯದಲ್ಲೇ ಹೆಲ್ಮೆಟ್‌ಗೆ ಬಡಿದ ಚೆಂಡು, ಆಸ್ಪತ್ರೆಗೆ ದಾಖಲಾದ ವಿಂಡೀಸ್‌ ಆಟಗಾರ

ಇದು ದಕ್ಷಿಣ ಆಫ್ರಿಕಾ ಕಳೆದ 115 ವರ್ಷಗಳ ಪ್ರಥಮ ದರ್ಜೆ ಇತಿಹಾಸದಲ್ಲಿ ಕಂಡುಬಂದ ಶ್ರೇಷ್ಠ ಬೌಲಿಂಗ್‌ ಪ್ರದರ್ಶನವಾಗಿದೆ. 1906ರಲ್ಲಿ ಈಸ್ಟರ್ನ್ ಪ್ರಾವಿನ್ಸ್‌ ತಂಡದ ಲೆಗ್‌ಸ್ಪಿನ್ನರ್‌ ಬರ್ಟ್‌ ವೋಗ್ಲರ್‌ ಗ್ರಿಕ್ವಾಲ್ಯಾಂಡ್‌ ವೆಸ್ಟ್‌ ತಂಡದ ವಿರುದ್ಧ 26 ರನ್ನಿತ್ತು 10 ವಿಕೆಟ್‌ ಉರುಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next