Advertisement
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 4 ವಿಕೆಟಿಗೆ 224 ರನ್ ರಾಶಿ ಹಾಕಿತು. ಇದು ಬಾಂಗ್ಲಾ ವಿರುದ್ಧ ತಂಡವೊಂದು ಪೇರಿಸಿದ ಅತ್ಯಧಿಕ ರನ್. ಬಾಂಗ್ಲಾದೇಶ 18.3 ಓವರ್‌ಗಳಲ್ಲಿ 141ಕ್ಕೆ ಆಲೌಟ್ ಆಯಿತು.ಹರಿಣಗಳ ಬೃಹತ್ ಮೊತ್ತದಲ್ಲಿ ಡೇವಿಡ್ ಮಿಲ್ಲರ್ ಅವರ ಶರವೇಗದ ಶತಕದ ಪಾತ್ರ ಮಹತ್ವದ್ದಾಗಿತ್ತು. ಮಿಲ್ಲರ್ ಕೇವಲ 36 ಎಸೆತಗಳಲ್ಲಿ 101 ರನ್ ಸಿಡಿಸಿ “ಸೆನ್ವೆಸ್ ಪಾರ್ಕ್’ನಲ್ಲಿ ವಿಜೃಂಭಿಸಿದರು. ಅವರ ಶತಕ ಕೇವಲ 35 ಎಸೆತಗಳಲ್ಲಿ ದಾಖಲಾಯಿತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ. ಈ ಆರ್ಭಟದ ವೇಳೆ ಮಿಲ್ಲರ್ ಬ್ಯಾಟಿನಿಂದ 9 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಯಲ್ಪಟ್ಟಿತು. ಸ್ಟ್ರೈಕ್‌ರೇಟ್ 280.55.
Related Articles
Advertisement
ಮಿಲ್ಲರ್ ವಿಶ್ವದಾಖಲೆಯ ಮಿಂಚುದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಕಡಿಮೆ 35 ಎಸೆತಗಳಿಂದ ಶತಕ ಬಾರಿಸಿ ನೂತನ ವಿಶ್ವದಾಖಲೆ ನಿರ್ಮಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮದೇ ನಾಡಿನ ರಿಚರ್ಡ್ ಲೆವಿ ದಾಖಲೆಯನ್ನು ಮುರಿದರು. ಲೆವಿ ನ್ಯೂಜಿಲ್ಯಾಂಡ್ ಎದುರಿನ 2012ರ ಹ್ಯಾಮಿಲ್ಟನ್ ಪಂದ್ಯದಲ್ಲಿ 45 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಮತ್ತೂಬ್ಬ ಬ್ಯಾಟ್ಸ್‌ಮನ್ ಫಾ ಡು ಪ್ಲೆಸಿಸ್ ಮತ್ತು ಭಾರತದ ಕೆ.ಎಲ್. ರಾಹುಲ್ 46 ಎಸೆತಗಳಲ್ಲಿ ಶತಕ ಪೂರೈಸಿ ಅನಂತರದ ಸ್ಥಾನ ಅಲಂಕರಿಸಿದ್ದಾರೆ. ಮಿಲ್ಲರ್ ಅವರ ಅರ್ಧ ಶತಕ 23 ಎಸೆತಗಳಿಂದ ಬಂತು. 51ರಿಂದ 100ಕ್ಕೆ ತಲುಪಲು ಮಿಲ್ಲರ್ ಎದುರಿಸಿದ್ದು ಬರೀ 12 ಎಸೆತ! ಮಿಲ್ಲರ್ 4ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಲಿಳಿದು ಶತಕ ಹೊಡೆದ ಮೊದಲ ಆಟಗಾರ. ಇಲ್ಲಿ ಮಿಲ್ಲರ್ 5ನೇ ಕ್ರಮಾಂಕದಲ್ಲಿ ಬಂದಿದ್ದರು. ಇದೇ ವರ್ಷ ಬಾಂಗ್ಲಾದೇಶ ವಿರುದ್ಧ ಕೋರಿ ಆ್ಯಂಡರ್ಸನ್ 94 ರನ್ ಬಾರಿಸಿದ್ದು 5ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಓರ್ವನ ಸರ್ವಾಧಿಕ ಮೊತ್ತವಾಗಿತ್ತು.ಮೊಹಮ್ಮದ್ ಸೈಫುದ್ದೀನ್ ಪಾಲಾದ 19ನೇ ಓವರಿನಲ್ಲಿ ಮಿಲ್ಲರ್ ಸತತ 5 ಸಿಕ್ಸರ್ ಸಹಿತ 31 ರನ್ ಸಿಡಿಸಿದರು. ಇನ್ನಿಂಗ್ಸಿನ ಕೊನೆಯ 4 ಓವರ್‌ಗಳಲ್ಲಿ ಮಿಲ್ಲರ್ ಬ್ಯಾಟಿನಿಂದ ಹರಿದು ಬಂದ ರನ್ ಬರೋಬ್ಬರಿ 59. ಈ ವೇಳೆ ಅವರು 6 ಸಿಕ್ಸರ್, 4 ಬೌಂಡರಿ ಹೊಡೆದರು. ಬಾಂಗ್ಲಾದ ಕೊನೆಯ 10 ಓವರ್‌ಗಳಲ್ಲಿ 146 ರನ್, ಕೊನೆಯ 5 ಓವರ್‌ಗಳಲ್ಲಿ 90 ರನ್ ಸೋರಿ ಹೋಯಿತು.