Advertisement

ಜಾಕ್‌ ಕ್ಯಾಲಿಸ್‌ ಬ್ಯಾಟಿಂಗ್‌ ಸಲಹೆಗಾರ

10:01 AM Dec 20, 2019 | sudhir |

ಜೋಹಾನ್ಸ್‌ಬರ್ಗ್‌: ಮಾಜಿ ಆಲ್‌ರೌಂಡರ್‌ ಜಾಕ್‌ ಕ್ಯಾಲಿಸ್‌ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಬುಧವಾರದಿಂದಲೇ ಅವರು ಕಾರ್ಯ ಆರಂಭಿಸಿದ್ದಾರೆ ಎಂದು ಕ್ರಿಕೆಟ್‌ ಸೌತ್‌ ಆಫ್ರಿಕಾ ಟ್ವೀಟ್‌ ಮಾಡಿದೆ.

Advertisement

ಕಳೆದ ವಾರ ದಕ್ಷಿಣ ಆಫ್ರಿಕಾ ತಂಡಕ್ಕೆ ಕೋಚ್‌ ಆಗಿ ಮಾಜಿ ಕ್ರಿಕೆಟಿಗ ಮಾರ್ಕ್‌ ಬೌಷರ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಕೋಚಿಂಗ್‌ ರೇಸ್‌ನಲ್ಲಿ ಕ್ಯಾಲಿಸ್‌ ಕೂಡ ಇದ್ದರು. ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

ಜಾಕ್‌ ಕ್ಯಾಲಿಸ್‌ 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದರು. 166 ಟೆಸ್ಟ್‌, 328 ಏಕದಿನ ಹಾಗೂ 25 ಟಿ20 ಪಂದ್ಯಗಳಲ್ಲಿ ಅವರು ಆಫ್ರಿಕಾವನ್ನು ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next