Advertisement

ದಕ್ಷಿಣ ಆಫ್ರಿಕಾ ತಂಡದಲ್ಲಿ ನೋರ್ಜೆ

09:36 AM Apr 19, 2019 | Team Udayavani |

ಜೊಹಾನ್ಸ್‌ ಬರ್ಗ್‌: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಗೆ ದಕ್ಷಿಣ ಆಫ್ರಿಕಾ ತಂಡ ಅಂತಿಮಗೊಂಡಿದೆ. ಸದ್ಯ ಗಾಯಾಳಾಗಿರುವ ವೇಗಿ ಅನ್ರಿಚ್‌ ನೋರ್ಜೆ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಲ್‌ರೌಂಡರ್‌ ವಿಯಾನ್‌ ಮುಲ್ಡರ್‌ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ರೀಝ ಹೆಂಡ್ರಿಕ್ಸ್‌ ಅವರನ್ನು ಕೈಬಿಡಲಾಗಿದೆ.

Advertisement

ಅನುಭವಿ ಬ್ಯಾಟ್ಸ್‌ಮನ್‌, ಆದರೆ ಇತ್ತೀಚೆಗೆ ಅಷ್ಟೇನೂ ಫಾರ್ಮ್ನಲ್ಲಿಲ್ಲದ ಹಾಶಿಮ್‌ ಆಮ್ಲ ಮೇಲೆ ಆಯ್ಕೆ ಸಮಿತಿ ವಿಶ್ವಾಸವಿರಿಸಿದೆ. ಫೆಬ್ರವರಿ 2018ರಿಂದೀಚೆ ಆಮ್ಲ ಏಕದಿನದಲ್ಲಿ ಕೇವಲ 3 ಅರ್ಧ ಶತಕ ಹಾಗೂ ಒಂದು ಶತಕ ಹೊಡೆದಿದ್ದಾರೆ.

ತಂಡದ ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳೆಂದರೆ ಆ್ಯಂಡಿಲ್‌ ಫೆಲುಕ್ವಾಯೊ ಮತ್ತು ಡ್ವೇನ್‌ ಪ್ರಿಟೋರಿಯಸ್‌. ವೇಗಿಗಳ ವಿಭಾಗದಲ್ಲಿ ರಬಾಡ, ಸ್ಟೇನ್‌ ಮತ್ತು ಎನ್‌ಗಿಡಿ ಇದ್ದಾರೆ.

ದಕ್ಷಿಣ ಆಫ್ರಿಕಾ ತಂಡ
ಫಾ ಡು ಪ್ಲೆಸಿಸ್‌ (ನಾಯಕ), ಜೆಪಿ ಡ್ಯುಮಿನಿ, ಡೇವಿಡ್‌ ಮಿಲ್ಲರ್‌, ಡೇಲ್‌ ಸ್ಟೇನ್‌, ಆ್ಯಂಡಿಲ್‌ ಫೆಲುಕ್ವಾಯೊ, ಇಮ್ರಾನ್‌ ತಾಹಿರ್‌, ಕಾಗಿಸೊ ರಬಾಡ, ಡ್ವೇನ್‌ ಪ್ರಿಟೋರಿಯಸ್‌, ಕ್ವಿಂಟನ್‌ ಡಿ ಕಾಕ್‌, ಅನ್ರಿಚ್‌ ನೋರ್ಜೆ, ಲುಂಗಿ ಎನ್‌ಗಿಡಿ, ಐಡನ್‌ ಮಾರ್ಕ್‌ರಮ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಹಾಶಿಮ್‌ ಆಮ್ಲ, ತಬ್ರೈಜ್‌ ಶಂಸಿ.

Advertisement

Udayavani is now on Telegram. Click here to join our channel and stay updated with the latest news.

Next