Advertisement

ಸ್ಕ್ವಾಷ್‌ ರ್‍ಯಾಂಕಿಂಗ್‌ ಅಗ್ರ 10ರಲ್ಲಿ ಸೌರವ್‌

10:41 PM Apr 01, 2019 | Team Udayavani |

ಹೊಸದಿಲ್ಲಿ: ಪರಿಷ್ಕೃತ ಸ್ಕ್ವಾಷ್‌ ರ್‍ಯಾಂಕಿಂಗ್‌ ಪುರುಷರ ವಿಭಾಗದಲ್ಲಿ ಭಾರತದ ಸೌರವ್‌ ಘೋಷ್‌ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಟಾಪ್‌-10 ಯಾದಿಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸೌರವ್‌ ಘೋಷ್‌ 2 ಸ್ಥಾನಗಳ ಏರಿಕೆ ಕಂಡು 10ನೇ ರ್‍ಯಾಂಕಿಂಗ್‌ ಪಡೆದಿದ್ದಾರೆ. ಇದು ಅವರ ವೃತ್ತಿ ಜೀವನ ಶ್ರೇಷ್ಠ ರ್‍ಯಾಂಕಿಂಗ್‌ ಆಗಿದೆ. ಈ ಹಿಂದೆ ಜೋತ್ಸಾ ಚಿನ್ನಪ್ಪ ಮತ್ತು ದೀಪಿಕಾ ಪಳ್ಳಿಕಲ್‌ ವನಿತಾ ವಿಭಾಗದ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದರು. ಈಜಿಪ್ಟ್ನ ವಿಶ್ವ ಚಾಂಪಿಯನ್‌ ಅಲಿ ಫ‌ರಾಗ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

2018-2019ರ ಋತುವಿನಲ್ಲಿ ಚಿಕಾಗೋದಲ್ಲಿ ನಡೆದ “ಪಿಸಿಎ ವಿಶ್ವ ಚಾಂಪಿಯನ್‌ಶಿಪ್‌’ನಲ್ಲಿ ಸೌರವ್‌ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಅನಂತರ ಸ್ವಿಜರ್‌ಲ್ಯಾಂಡ್‌ನ‌ಲ್ಲಿ ನಡೆದ “ಗ್ರಾಸ್‌ಹೋಪರ್‌ ಕಪ್‌’ ಕೂಟದಲ್ಲೂ ಅವರು ಕ್ವಾರ್ಟರ್‌ ಫೈನಲ್‌ ತಲುಪಿದ್ದರು.ವನಿತಾ ಸಿಂಗಲ್ಸ್‌ ವಿಭಾಗದಲ್ಲಿ ಜೋತ್ಸಾ$° ಚಿನ್ನಪ್ಪ ಭಾರತದ ಅಗ್ರ ರ್‍ಯಾಂಕಿನ ಆಟಗಾರ್ತಿಯಾಗಿ ಮುಂದುವರಿದಿದ್ದು, 15ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next