Advertisement

ಸೌರವ್‌ ಗಂಗೂಲಿಗೆ ಮೊದಲ ಸವಾಲು

12:13 PM Oct 28, 2019 | Suhan S |

ಮುಂಬಯಿ, ಅ. 27: ಬಿಸಿಸಿಐ ಅಧ್ಯಕ್ಷರಾಗಿ ಮೊನ್ನೆ ಮೊನ್ನೆಯಷ್ಟೇ ಆಯ್ಕೆಯಾಗಿರುವ ಸೌರವ್‌ ಗಂಗೂಲಿಗೆ ಮೊದಲ ದೊಡ್ಡ ಸವಾಲು ಎದುರಾಗಿದೆ.

Advertisement

ನವೆಂಬರ್‌ ತಿಂಗಳ ಅಂತ್ಯಕ್ಕೆ ಪಾಕಿಸ್ಥಾನ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಭಾರತದಲ್ಲಿಏಕದಿನ ಪಂದ್ಯ ಆಯೋಜಿಸಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿಲ್ಲ. ಮತ್ತೂಂದು ಕಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ, ಸರಕಾರದ ಲಿಖೀತ ಉತ್ತರವನ್ನು ಸಲ್ಲಿಸಿ ಎಂದು ಬಿಸಿಸಿಐಗೆ ಹೇಳಿದೆ. ಈ ಸಂದರ್ಭವನ್ನು ಗಂಗೂಲಿ ಹೇಗೆ ನಿಭಾಯಿಸುತ್ತಾರೆನ್ನುವುದು ಈಗಿನ ಕುತೂಹಲ.

ವಿಶ್ವಕಪ್‌ ಅರ್ಹತಾ ಸರಣಿ ಈ ಸರಣಿ ಪಾಕಿಸ್ಥಾನ ವಿರುದ್ಧದ ಮಾಮೂಲು ದ್ವಿಪಕ್ಷೀಯ ಸರಣಿ ಅಲ್ಲ. ಅದು ಐಸಿಸಿಯೇ ಆಯೋಜಿಸಿರುವ ವಿಶ್ವ ಚಾಂಪಿಯನ್‌ ಶಿಪ್‌ ವ್ಯಾಪ್ತಿಯಲ್ಲಿ ಬರುತ್ತದೆ. 2021ರ ವಿಶ್ವಕಪ್‌ಗೆ ಅರ್ಹತಾ ಸರಣಿಯೂ ಹೌದು. ಯಾವುದೇ ವಿಶ್ವಕೂಟಗಳನ್ನು ಆತಿಥೇಯತ್ವಹೊಂದಿದ ದೇಶ ನಿರ್ಲಕ್ಷಿಸುವ ಹಾಗಿಲ್ಲ, ಹಾಗೆಯೇ ಪ್ರವಾಸಿ ತಂಡವೂ ತಕರಾರು ಮಾಡುವಂತಿಲ್ಲ.

ಇಂತಹ ಹೊತ್ತಿನಲ್ಲೇ ಪಾಕಿಸ್ಥಾನದ ವನಿತಾ ತಂಡಕ್ಕೆ ಭಾರತಕ್ಕೆ ಬರಲು ಕೇಂದ್ರ ಸರಕಾರ ಅನುಮತಿ ನೀಡಿಲ್ಲ. ಇನ್ನೊಂದು ಕಡೆ ಭಾರತ ತಿರಸ್ಕರಿಸಿದರೆ, ತಂಡ ಸಂಪೂರ್ಣ ಅಂಕ ಕಳೆದುಕೊಳ್ಳುತ್ತದೆ. ಆಗ 2021ರ ವಿಶ್ವಕಪ್‌ಗೆ ಅರ್ಹತೆ ಪಡೆಯುವುದು ಕಷ್ಟವಾಗಬಹುದು. ಈ ಇಕ್ಕಟ್ಟಿನ  ಸನ್ನಿವೇಶ ಗಂಗೂಲಿಗೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next