Advertisement
ಮುಂದಿನ ಆವತ್ತಿಯ ಐಪಿಎಲ್‌ನಲ್ಲಿ ಕೋಲ್ಕತಾದ ಉದ್ಯಮಿ ಸಂಜೀವ್ ಗೋಯೆಂಕಾ ಮಾಲಕತ್ವದ “ಆರ್‌ಪಿಜಿಎಸ್ ಗ್ರೂಪ್’ ಲಕ್ನೋ ಮೂಲದ ಫ್ರಾಂಚೈಸಿಯನ್ನು 7,090 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಅವರು ಎಟಿಕೆ ಮೋಹನ್ ಬಗಾನ್ ಮಾಲಕತ್ವವನ್ನೂ ಹೊಂದಿದ್ದಾರೆ. ಇದರಿಂದಾಗಿ ಗಂಗೂಲಿ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದಂತಾಗುತ್ತಿತ್ತು. ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ, ಎಟಿಕೆ ಮೋಹನ್ ಬಗಾನ್ ಫ್ರಾಂಚೈಸಿಯ ನಿರ್ದೇಶಕ ಹುದ್ದೆಯನ್ನು ಹೊಂದಿದ್ದರು. ಈಗ ಈ ಜವಾಬ್ದಾರಿಯಿಂದ ಹೊರಬಂದಿದ್ದಾರೆ.
Related Articles
Advertisement
2019ರಲ್ಲೂ “ಸಂಘರ್ಷ’:
2019ರಲ್ಲೂ ಸೌರವ್ ಗಂಗೂಲಿ ಸ್ವಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪವನ್ನು ಎದುರಿಸಿದ್ದರು. ಬಂಗಾಲ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷ ಹುದ್ದೆಯ ಜತೆಗೆ ಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು.