Advertisement

ರೈತರ ಪಾಲಿಗೆ ಹುಳಿಯಾದ ದ್ರಾಕ್ಷಿ 

06:15 AM Jun 04, 2018 | |

ಚಿಕ್ಕಬಳ್ಳಾಪುರ: ಇದೇ ವೇಳೆ, ರೈತರಿಗೆ ದ್ರಾಕ್ಷಿ ಕೂಡ ಹುಳಿಯಾಗಿ ಪರಿಣಮಿಸಿದೆ. 30-40 ರೂ.ಗೆ
ಮಾರಾಟಗೊಳ್ಳುತ್ತಿದ್ದ ಕೆಜಿ ದ್ರಾಕ್ಷಿ, ಇದೀಗ ಕನಿಷ್ಠ 10 ರೂ.ಗೂ ಕೇಳ್ಳೋರೇ ಇಲ್ಲದಂತಾಗಿದೆ.

Advertisement

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ತೋಟಗಾರಿಕೆ
ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 2,000 ರಿಂದ 2,500 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಆದರೆ,ಕಟಾವು ಹಂತಕ್ಕೆ ಬಂದಿರುವ ಸಂದರ್ಭದಲ್ಲಿಯೇ ದ್ರಾಕ್ಷಿ ಬೆಲೆ ದಿಢೀರ್‌ ಕುಸಿತಗೊಂಡಿರುವುದ ರಿಂದ ರೈತರು ಬೆಳೆದಿರುವ ಅಪಾರ ಪ್ರಮಾಣದ ದ್ರಾಕ್ಷಿಗೆ ಖರೀದಿ ದಾರರೇ ಇಲ್ಲದೇ ತೋಟಗಳಲ್ಲಿ ಕೊಳೆಯುವಂತಾಗಿದೆ.

ನಾಲ್ಕೈದು ತಿಂಗಳ ಹಿಂದೆ ಆಲಿಕಲ್ಲು ಸಮೇತ ಬಿದ್ದ ಬಿರುಗಾಳಿ ಮಳೆಗೆ ತಾಲೂಕಿನ ಸುತ್ತಮುತ್ತ 800ಕ್ಕೂ ಹೆಚ್ಚು
ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ನೆಲಕಚ್ಚಿತ್ತು. ಸುಮಾರು 20 ಕೋಟಿ ರೂ.ಗೂ ಮೀರಿ ನಷ್ಟವಾಗಿತ್ತು. ಆಗ
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ, ಬೆಳೆಯಿಲ್ಲದೆ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಎನ್ನುವಂತಾಗಿತ್ತು. ಈಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದೆ. ಕನಿಷ್ಠ ಒಂದು ಎಕರೆಯಲ್ಲಿ ದ್ರಾಕ್ಷಿ
ಬೆಳೆಯಬೇಕಾದರೆ ಒಂದರಿಂದ ಒಂದೂವರೆ ಲಕ್ಷ ರೂ. ಖರ್ಚು ಬರುತ್ತದೆ. ಲಕ್ಷಾಂತರ ರೂ.ಬಂಡವಾಳ ಸುರಿದು
ದ್ರಾಕ್ಷಿ ಬೆಳೆದ ರೈತರು, ಈಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಹೀಗಾಗಿ, ಬಹಳಷ್ಟು ರೈತರು ತೋಟಗಳಲ್ಲಿ ದ್ರಾಕ್ಷಿಯನ್ನು ಕಟಾವು ಮಾಡದೇ ಹಾಗೆ ಬಿಟ್ಟು ಬಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಸುತ್ತಮುತ್ತ ದ್ರಾಕ್ಷಿ ಬೆಳೆ ಗಾರರ ಸಂಖ್ಯೆ ಜಾಸ್ತಿಯಾಗಿದೆ. ಬೇಡಿಕೆ ಗಿಂತ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಮಾರುಕಟ್ಟೆಗೆ ಬರುತ್ತಿದೆ. ಜೊತೆಗೆ, ಮಹಾರಾಷ್ಟ್ರದ ಸಾಂಗ್ಲಿ ಪ್ರದೇಶದ ದ್ರಾಕ್ಷಿ ಕೂಡ ಮಾರು ಕಟ್ಟೆ ಪ್ರವೇ ಶಿಸಿರುವುದರಿಂದ ಬೆಲೆ ಕುಸಿತವಾಗಿದೆ ಎಂದು ದ್ರಾಕ್ಷಿ ವ್ಯಾಪಾರಸ್ಥ ಎಂಎಫ್ಸಿ ನಾರಾಯಣಸ್ವಾಮಿ “ಉದಯವಾಣಿ’ಗೆ ತಿಳಿಸಿದರು.

ಉತ್ತಮ ಫ‌ಸಲು ಬಂದಿದೆ. ಆದರೆ, ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಹಾಕಿದ ಬಂಡವಾಳ
ಬರುವುದಿಲ್ಲ. ಆದ್ದರಿಂದ ದ್ರಾಕ್ಷಿಯನ್ನು ಹಾಗೇ ತೋಟದಲ್ಲಿ ಬಿಟ್ಟಿದ್ದೇನೆ.
– ಮುನಿವೆಂಕಟಪ್ಪ, ದ್ರಾಕ್ಷಿ ಬೆಳೆಗಾರ

Advertisement

ಕೆಲವರು ಬಾವಲಿಗಳು ಕಚ್ಚಿದ ಹಣ್ಣು ತಿಂದರೆ ನಿಪ ವೈರಸ್‌ ಹರಡುತ್ತದೆ ಎಂಬ ಸುದ್ದಿ ಹಬ್ಬಿರುವುದರಿಂದ ಅದರ ಎಫೆಕ್ಟ್ ಈಗ ದ್ರಾಕ್ಷಿ ಬೆಳೆ ಮೇಲೆ ಕೂಡ ಬಿದ್ದಿದೆ ಎನ್ನಲಾಗುತ್ತಿದೆ. ಆದರೆ, ದ್ರಾಕ್ಷಿ ತೋಟಗಳಲ್ಲಿ ಬಾವಲಿಗಳ ವಾಸಕ್ಕೆ
ಅವಕಾಶವೇ ಇರುವುದಿಲ್ಲ.
– ಯಲುವಹಳ್ಳಿ ಸೊಣ್ಣೇಗೌಡ, ಪ್ರಗತಿಪರ ರೈತ

Advertisement

Udayavani is now on Telegram. Click here to join our channel and stay updated with the latest news.

Next