Advertisement

ತಂ ತಂ ತಮಟೆ…

12:54 PM Dec 15, 2018 | |

ತಮಟೆ ಸದ್ದು ಕೇಳಿದರೆ ಕೈ-ಕಾಲು ತನ್ನಿಂತಾನೆ ಕುಣಿಯೋಕೆ ಶುರು ಮಾಡುತ್ತೆ. ಇನ್ನು, ನೂರಾರು ತಮಟೆಗಳು ಒಟ್ಟಿಗೆ ಸದ್ದು ಮಾಡಿದರೆ ಹೇಗಿರಬಹುದು? ಆ ವಾತಾವರಣದಲ್ಲೊಂದು ಶಕ್ತಿ ಸಂಚಲನವಾಗೋದರಲ್ಲಿ ಅನುಮಾನವಿಲ್ಲ. ಕ್ರಿಸ್ಮಸ್‌ ಹಬ್ಬದ ಅಂಗವಾಗಿ “ಸೋಲ್‌ ಫ್ಲೀ’ ಎಂಬ ಡ್ರಮ್ಮರ್‌ಗಳ ಮೇಳ ಆಯೋಜನೆಯಾಗಿದೆ. ಕರಕುಶಲ ಸಮುದಾಯಕ್ಕೆ ಮೀಸಲಾದ “ಸಂಪೂಣ್‌ì’ ಸಂಸ್ಥೆ ಈ ಮೇಳ ನಡೆಸುತ್ತಿದ್ದು, ಅಗ್ನಿ ಆರ್ಟ್‌ ಸಂಸ್ಥೆ ಮೇಳದ ಸಾರಥ್ಯ ವಹಿಸಲಿದೆ. ಈ ಮೇಳ ಎಲ್ಲರಿಗೂ ಮುಕ್ತವಾಗಿದ್ದು, ನೀವೂ ಕೂಡ ತಮಟೆಯೊಂದಿಗೆ ಬಂದು ಡ್ರಮ್ಮರ್‌ಗಳಿಗೆ ಸಾಥ್‌ ನೀಡಬಹುದು. 

Advertisement

ಮೇಳದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನವೂ ಇರಲಿದೆ. 120ಕ್ಕೂ ಹೆಚ್ಚು ಮಳಿಗೆಗಳಲ್ಲಿ, ಗೃಹಾಲಂಕಾರ ವಸ್ತುಗಳು, ಬಾಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳು ಎಲ್ಲರ ಗಮನ ಸೆಳೆಯಲಿವೆ. ಇವೆಲ್ಲದಕ್ಕೂ ಹಿಮ್ಮೇಳವೆಂಬಂತೆ ಬಾಲಿವುಡ್‌ ಗಾಯಕ  ರಖೀಬ್‌ ಸಂಗೀತ, ಪ್ರಶಾಂತ್‌ ಜೋಷಿಯವರ ಇಂಗ್ಲಿಷ್‌ ಗೀತೆಗಳು ಮೋಡಿ ಮಾಡಲಿವೆ. 

ಎಲ್ಲಿ?: ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌, ಜಯಮಹಲ್‌ ರಸ್ತೆ 
ಯಾವಾಗ?: ಡಿ. 16, ಭಾನುವಾರ  ಬೆಳಗ್ಗೆ 11
ಹೆಚ್ಚಿನ ಮಾಹಿತಿಗೆ: 9742204002

Advertisement

Udayavani is now on Telegram. Click here to join our channel and stay updated with the latest news.

Next