Advertisement
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅನ್ಯಾಯಕ್ಕೆ ಈಡಾದ ಕುಟುಂಬದ ಪರವಾಗಿ ನಿಲ್ಲುವೆವು. ಅನ್ಯಾಯಕ್ಕೊಳಗಾದವರ ಪರವಾಗಿ ಆಯೋಗದಿಂಂದ ಯಾವೆಲ್ಲ ರೀತಿ ಕಾನೂನು ರೀತಿ ಮುಂದುವರಿಯಲು ಸಾಧ್ಯವಿದೆಯೋ ಎಂಬುದನ್ನು ಎಲ್ಲ ಆಯಾಮಗಳಡಿ ಪರಿಶೀಲಿಸ ಲಾಗುವುದು. ಬಳಿಕ ಸರಕಾರದ ಹಾಗೂ ಸಿಎಂ ಗಮನಕ್ಕೆ ತಂದು ಮನವರಿಕೆ ಮಾಡಲಿದ್ದೇವೆ ಎಂದರು.
ಸೌಜನ್ಯಾಳ ಸಹೋದರ ಹಾಗೂ ಸಹೋದರಿಯರಲ್ಲಿ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಶಿಫಾರಸು ಮಾಡಲಾಗುವುದು ಎಂದರು. ಬಸ್, ಅಂಗನವಾಡಿಗೆ ಯೋಚನೆ
ಕೃತ್ಯ ನಡೆದ ಸ್ಥಳದಲ್ಲಿ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದು, ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸ್ಥಳೀಯವಾಗಿ ಅಂಗನವಾಡಿ ಕೇಂದ್ರದ ಬೇಡಿಕೆ ಬಗ್ಗೆ ಸೌಜನ್ಯಳ ಮನೆಮಂದಿಗೆ ತಿಳಿಸಿದ್ದಾರೆ. ಬಸ್ ವ್ಯವಸ್ಥೆ ಮಾಡುವಂತೆ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್‌ಗೆ ಸೂಚಿಸಿದ್ದೇನೆ ಎಂದರು.
Related Articles
ಇದಕ್ಕೂ ಮುನ್ನ ಸೌಜನ್ಯಾ ಮೃತದೇಹ ದೊರೆತ ಸ್ಥಳಕ್ಕೆ ಭೇಟಿ ನೀಡಿದ ಅವರು ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಮಾವ ವಿಟuಲ ಗೌಡರಿಂದ ಮಾಹಿತಿ ಕಲೆ ಹಾಕಿದರು.
ವಿಟ್ಲದಲ್ಲಿ ದೌರ್ಜನ್ಯಕ್ಕೆ ಈಡಾದ ಮಗುವಿಗೆ ನ್ಯಾಯ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದ ಅವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
Advertisement
ಸಿಡಿಪಿಒ ಪ್ರಿಯಾ ಆ್ಯಗ್ನೆಸ್, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ, ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತೀ ಗ್ರಾಮದಲ್ಲಿ ಪೋಕ್ಸೋ ಜಾಗೃತಿಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಾಗನ ಗೌಡ ಅವರು, ಪೋಕ್ಸೋ ಎಂಬ ಗಂಭೀರ ಕಾನೂನಿನ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿದರೆ ಅದರ ಶಿಕ್ಷೆಯ ಪ್ರಮಾಣದ ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೈಕ್ ಮೂಲಕ ಮೈಕ್‌ನಲ್ಲಿ ಪ್ರಚಾರ ಮಾಡುವಂತೆ ತಹಶೀಲ್ದಾರ್ ಮತ್ತು ತಾ.ಪಂ. ಇಒ, ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.