Advertisement

ಸೊರಬ : ಗೌರಿಕೆರೆ ಮಠದಲ್ಲಿ ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ

11:45 AM Aug 27, 2022 | Team Udayavani |

ಸೊರಬ: ಪುರಸಭೆ ವ್ಯಾಪ್ತಿಯ ಹಳೇಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ.

Advertisement

ಮಹೇಂದ್ರಸ್ವಾಮಿ ಎಂಬುವವರಿಗೆ ಸೇರಿದ ಎಮ್ಮೆ ಶನಿವಾರ ಬೆಳಗಿನ ಜಾವ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿದ್ದು, ಕಣ್ಣುಗಳು ಮತ್ತು ಗೊರಸು ಇಲ್ಲದೇ ಬಾಯಿಯ ಮೂಲಕವೇ ಉಸಿರಾಡುತ್ತಿದೆ. ದೇಹ ಸಾಮಾನ್ಯ ಸ್ಥಿತಿಯಲ್ಲಿದ್ದರು ಏಳಲು ಸಾಧ್ಯವಾಗದೇ ಒದ್ದಾಡುತ್ತಿದೆ.

ಎಮ್ಮೆಗೆ ಜನಿಸಿದ ಆರನೇ ಕರುವಾಗಿದ್ದು, ಐದು ಕರುಗಳು ಸಾಮಾನ್ಯವಾಗಿ ಜನಿಸಿದ್ದವು. ಆದರೆ, ಆರನೇ ಕರುವು ವಿಚಿತ್ರವಾಗಿ ಜನಿಸಿದೆ. ವೈದ್ಯರನ್ನು ಸಂಪರ್ಕಿಸಿದಾಗ ಕರು ಹೆಚ್ಚು ಕಾಲ ಬದುಕುವುದಿಲ್ಲ ಎಂದಿದ್ದಾರೆ ಎನ್ನುತ್ತಾರೆ ಎಮ್ಮೆಯ ಮಾಲೀಕ ಮಹೇಂದ್ರ ಸ್ವಾಮಿ.

ಇದನ್ನೂ ಓದಿ : ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಯುಯು ಲಲಿತ್ ಪ್ರಮಾಣವಚನ ಸ್ವೀಕಾರ

Advertisement

Udayavani is now on Telegram. Click here to join our channel and stay updated with the latest news.

Next