Advertisement

ಪೊಲೀಸರ ಮಿಂಚಿನ ಕಾರ್ಯಾಚರಣೆ : ಮೂವರು ದರೋಡೆಕೋರರ ಬಂಧನ

08:43 PM Oct 17, 2020 | sudhir |

ಸೊರಬ: ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

Advertisement

ಘಟನೆ ಹಿನ್ನೆಲೆ: ಅ.14ರಂದು ತಾಲೂಕಿನ ಛತ್ರದಹಳ್ಳಿ ಗ್ರಾಮದ ಸಮೀಪ ಲಲಿತಮ್ಮ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು. ಘಟನೆ ನಡೆದ ಎರಡೇ ದಿನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಲೂಕಿನ ಮಂಗಾಪುರ ಗ್ರಾಮದ ಎಸ್. ಪ್ರಶಾಂತ್ ಶಿವಾಜಿ (27), ಮೈಸೂರಿನ ಗಣೇಶ ನರಸಿಂಹ (22) ಹಾಗೂ ಹಾನಗಲ್ಲ ತಾಲೂಕು ಅಕ್ಕಿ ಆಲೂರು ಗ್ರಾಮದ ಪ್ರಶಾಂತ ಬಸಪ್ಪ (20) ಎಂಬವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ:ನೆರೆ ಹಾವಳಿಯಿಂದ ಕರ್ನಾಟಕ ನಲುಗಿ ಹೋದರೂ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ: ಸಿದ್ದು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್, ಶಿಕಾರಿಪುರ ಎಎಸ್‌ಪಿ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಸಿಪಿಐ ಆರ್.ಡಿ. ಮರುಳುಸಿದ್ದಪ್ಪ, ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಾಲ್ಲೂಕಿನ ಸಂಪಗೋಡು ಸಮೀಪ ಅನುಮಾನಸ್ಪದ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಪರಮೇಶನಾಯ್ಕ್, ಕಾನ್ಸ್‌ಟೇಬಲ್‌ಗಳಾದ ದಿನೇಶ್, ಸಲ್ಮಾನ್‌ಖಾನ್, ಸಂದೀಪ, ಸಂದೀಪ ಕುಮಾರ್, ಸಿದ್ದನಗೌಡ, ಹನುಮಂತ, ಮಂಜುನಾಥ್ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next