Advertisement

ಮಾಸ್ಕ್ ಧರಿಸದವರಿಗೆ ದಂಡ

07:06 PM Jul 08, 2020 | Naveen |

ಸೊರಬ: ಪಟ್ಟಣದಲ್ಲಿ ಹರಡುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಪಂ ಮಾಸ್ಕ್ ಇಲ್ಲದೇ ಬೇಜವಾಬ್ದಾರಿತನ ತೋರುವವರಿಗೆ ದಂಡ ವಿಧಿಸಲು ಮುಂದಾಗಿದೆ.

Advertisement

ಪಪಂ ಅಧಿಕಾರಿಗಳು ದಂಡ ವಿಧಿಸುವ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಎರಡು ದಿನಗಳಲ್ಲಿ ಸುಮಾರು 5050 ರೂ., ದಂಡ ವಸೂಲಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಮಾಸ್ಕ್ ಧರಿಸಿ ಓಡಾಡುವುದನ್ನು ಕಡ್ಡಾಯಗೊಳಿಸಿದ್ದು, ಪಪಂ ಸಹ ಕ್ರಮ ಕೈಗೊಂಡಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ 100 ರೂ., ದಂಡ ವಿಧಿಸಲಾಗುತ್ತಿದೆ. ಮಾಸ್ಕ್ ಧರಿಸಿದೇ ಸಂಚರಿಸುತ್ತಿದ್ದ ಕಂದಾಯ ಇಲಾಖೆಯ ಸಿಬ್ಬಂದಿಗಳೇ ದಂಡ ತೆತ್ತ ಘಟನೆಯೂ ನಡೆಯಿತು. ಕಾರ್ಯಾಚರಣೆಯಲ್ಲಿ ಪಪಂ ಮುಖ್ಯಾ ಧಿಕಾರಿ ಜಗದೀಶ್‌ ನಾಯ್ಕ, ಆರ್‌ಐ ಜಿ. ವಿನಾಯಕ್‌, ಅಧಿಕಾರಿಗಳಾದ ಕೆ.ಎಸ್‌. ರಮೇಶ್‌, ಸಿಬ್ಬಂದಿ ನಾಗರಾಜ್‌, ಏಳುಕೋಟಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next