Advertisement

ಗುರುವಿನ ಸಾನ್ನಿಧ್ಯದಿಂದ ಬದುಕು ಸಾರ್ಥಕ

10:45 AM Nov 20, 2021 | Team Udayavani |

ಸೊರಬ: ಗುರು ಸಾನ್ನಿಧ್ಯದಿಂದ ಮಾತ್ರ ಬದುಕುಸಾರ್ಥಕವಾಗಲು ಸಾಧ್ಯವಿದೆ. ಮೊಬೈಲ್‌ವ್ಯಾಮೋಹಕ್ಕೆ ಒಳಗಾಗಿ ಗುರು-ಹಿರಿಯರನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಬಸವಾದಿ ಶರಣರ ವಚನ ಸಂದೇಶಗಳುಉತ್ತಮ ವ್ಯಕ್ತಿಯಾಗಿ ನಿರ್ಮಾಣವಾಗಲುಹಾಗೂ ಮನಸ್ಸಿನ ಶುದ್ಧೀಕರಣಕ್ಕೆಮಾರ್ಗದರ್ಶನವಾಗಿವೆ ಎಂದು ಜಡೆ ಸಂಸ್ಥಾನಮಠದ ಉತ್ತರಾಧಿ ಕಾರಿ ಶ್ರೀ ರುದ್ರದೇವರು ತಿಳಿಸಿದರು.

Advertisement

ಪಟ್ಟಣದ ಮುರುಘಾಮಠದಸಭಾಂಗಣದಲ್ಲಿ ಕಾರ್ತಿಕ ಮಾಸದ ಗೌರಿಹುಣ್ಣಿಮೆ ಹಾಗೂ 183ನೇ ಮಾಸಿಕಶಿವಾನುಭವ ಗೋಷ್ಠಿಯಲ್ಲಿ ಅವರುಉಪನ್ಯಾಸ ನೀಡಿದರು.ಆಧುನಿಕತೆ ಭರಾಟೆಯಲ್ಲಿ ತಂತ್ರಜ್ಞಾನಗಳಬಳಕೆ ಹೆಚ್ಚುತ್ತಿದ್ದು, ಈ ನಡುವೆ ಬದುಕುಸಾರ್ಥಕವಾಗಲು ಗುರುವಿನ ಮಾರ್ಗದರ್ಶನಮತ್ತು ಆಶೀರ್ವಾದ ಅಗತ್ಯ. ಆಡಂಬರದಬದುಕು ಸಲ್ಲದು. ಬದುಕಿಗೆ ಆಹಾರ ಮತ್ತುಆರೋಗ್ಯ ಮುಖ್ಯವಾಗಿದೆ.

ಜೀವಿತಾವಧಿಯಲ್ಲಿ ಸಮಾಜದಲ್ಲಿ ಸತ್ಕಾರ್ಯಗಳಲ್ಲಿತೊಡಗಿಕೊಳ್ಳಬೇಕು ಎಂದರು.ಜನಸಂಗ್ರಾಮ ಪರಿಷತ್‌ ಅಧ್ಯಕ್ಷ ಡಿ.ಎಸ್‌.ಶಂಕರ್‌ ಶೇಟ್‌ ಮಾತನಾಡಿ, ಸದೃಢಸಮಾಜದ ನಿರ್ಮಾಣದಲ್ಲಿ ಮಠ-ಮಾನ್ಯಗಳಪಾತ್ರ ಮಹತ್ವದ್ದಾಗಿದೆ. ಜಡೆ ಸಂಸ್ಥಾನ ಮಠಹಾಗೂ ಸೊರಬ ಮುರುಘಾಮಠ ಸರ್ವಸಮುದಾಯದ ಭಕ್ತರನ್ನು ಹೊಂದಿದ್ದು,ಶ್ರೀಗಳು ಸಮಾಜ ಸನ್ಮಾರ್ಗದಲ್ಲಿ ನಡೆಯಲುದಾರಿದೀಪವಾಗಿದ್ದಾರೆ ಎಂದರು.

ಜಡೆ ಸಂಸ್ಥಾನಮಠ ಹಾಗೂ ಮುರುಘಾಮಠದ ಶ್ರೀ ಡಾ|ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಅಕ್ಕನ ಬಳಗದ ಜಯಮಾಲಾ ಅಣ್ಣಾಜಿಗೌಡ, ವೀರಶೈವ ಲಿಂಗಾಯತ ಸಂಘಟನಾವೇದಿಕೆಯ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್‌ ಗೌಡ,ಜೆಸಿಐ ಅಧ್ಯಕ್ಷೆ ಗೀತಾ ನಿಂಗಪ್ಪ, ಜಿಪಂ ಮಾಜಿಸದಸ್ಯರಾದ ಪಾಣಿ ರಾಜಪ್ಪ, ದೇವಕಿ ಪಾಣಿ,ಮುರುಘಾಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಪ್ರಮುಖರಾದ ಶ್ರೀಧರ ಮೂರ್ತಿನಡಹಳ್ಳಿ ಸೇರಿದಂತೆ ಇತರರಿದ್ದರು. ಅಕ್ಕನಬಳಗದವರು ವಚನಗಳನ್ನು ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next