Advertisement

ತಾಲೂಕಿನ ಸಮಗ್ರ ಅಭಿವೃದ್ಧಿಯೇ ಧ್ಯೇಯ

03:56 PM Dec 22, 2019 | Team Udayavani |

ಸೊರಬ: ತಾಲೂಕಿನ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯವಾಗಿದ್ದು, ಚಿಕ್ಕಪುಟ್ಟ ಗ್ರಾಮಗಳನ್ನು ಪಟ್ಟಣದ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಿ ಆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಹಾಗೂ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವುದು ನನ್ನ ಗುರಿಯಾಗಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು.

Advertisement

ತಾಲೂಕಿನ ಕುಂದಗಸವಿ ಗ್ರಾಮದಲ್ಲಿ ಸಾಗರ- ಹಾವೇರಿ ರಸ್ತೆಯ ಕವಡಿ ಗ್ರಾಮದಿಂದ ಕುಂದಗಸವಿ ಎಸ್ಸಿ ಕೇರಿಗೆ ಸಂಪರ್ಕ ಕಲ್ಪಿಸುವ ಸುಮಾರು 1 ಕೋಟಿ ರೂ. ವೆಚ್ಚದ ಡಾಂಬರೀಕರಣ ರಸ್ತೆಯ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಯಲ್ಲಿ ರಸ್ತೆ, ನೀರು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ನೀರಾವರಿ ಮತ್ತು ರಸ್ತೆಯ ಅಭಿವೃದ್ಧಿಯೆಡೆಗೆ ಗಮನ ಕೊಡುತ್ತೇನೆ. ನಾನು ಶಾಸಕನಾಗಿ ದಿ.ಬಂಗಾರಪ್ಪನವರ ಹಿಂದುಳಿದ ವರ್ಗದ ಏಳಿಗೆಯನ್ನು ಮುಂದುವರಿಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎನ್ನುವ
ಧ್ಯೇಯ ವಾಕ್ಯದೊಂದಿಗೆ ತಾಲೂಕಿನ ಕುಗ್ರಾಮಗಳನ್ನು ಅಭಿವೃದ್ಧಿಯ ಪಥದೆಡೆಗೆ ತೆಗೆದುಕೊಂಡು ತಾಲೂಕನ್ನು ಸರ್ವತೋಮುಖ ಅಭಿವೃದ್ಧಿಪಡಿಸುತ್ತೇನೆ ಎಂದರು.

ಜಿಪಂ ಸದಸ್ಯೆ ತಾರಾ ಶಿವಾನಂದ್‌, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ್‌ ಹೆಗಡೆ, ತಾಪಂ ಸದಸ್ಯ ನಾಗರಾಜ್‌ ಚಿಕ್ಕಸವಿ, ಶಿಗ್ಗಾ ಗ್ರಾಪಂ ಅಧ್ಯಕ್ಷೆ ವಸಂತಾ ಶಿವಮೂರ್ತಿ, ಉಪಾಧ್ಯಕ್ಷ ಪ್ರಭಾಕರ,
ಪ್ರಮುಖರಾದ ಎಂ.ಡಿ. ಉಮೇಶ್‌, ಕೃಷ್ಣಪ್ಪ ಶಿಗ್ಗಾ, ಭೋಗೇಶ್‌, ಗ್ರಾಮದ ಪ್ರಮುಖರಾದ ಲಕ್ಕಪ್ಪ, ನೀಲಕಂಠಪ್ಪ, ಕೆರಿಯಪ್ಪ, ಹನುಮಂತಪ್ಪ, ಕಾಳಿಂಗಪ್ಪ, ಬಸವರಾಜಪ್ಪ, ಲೇಕಪ್ಪ, ಕೃಷ್ಣಮೂರ್ತಿ, ಅಜ್ಜಪ್ಪ, ಶೇಖರಪ್ಪ, ಹುಚ್ಚಪ್ಪ, ಪ್ರವೀಣ್‌, ಲಿಂಗರಾಜ, ಡಾಕಪ್ಪ, ಗಣೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next