Advertisement

ಸಂಸ್ಕಾರದ‌ ಶಿಕ್ಷಣದಿಂದ ಮಾತ್ರ ಸುಸಜ್ಜಿತ ಸಮಾಜ ನಿರ್ಮಾಣ

11:36 PM Apr 09, 2019 | sudhir |

ಸೋಮವಾರಪೇಟೆ: ಸಂಸ್ಕಾರ ವಂತ ಶಿಕ್ಷಣ ದಿಂದ ಮಾತ್ರ ಉತ್ತಮ ಪ್ರಜೆ ಹಾಗು ಸುಸಜ್ಜಿತ ಸಮಾಜ ನಿರ್ಮಾಣ ಸಾಧ್ಯ ಆದ್ದರಿಂದಲೇ ಶಿವಕುಮಾರ ಸ್ವಾಮೀಜಿಗಳು ಇಂತಹ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಎಂದು ಮುದ್ದಿನ ಕಟ್ಟೆ ಮಠಾಧೀಶರಾದ ಶ್ರೀಅಭಿನವ ಸಿದ್ದಲಿಂಗ ಶಿವಾರ್ಚಾಯ ಸ್ವಾಮೀಜಿ ಹೇಳಿದ್ದರು.

Advertisement

ಅಖೀಲ ಭಾರತ ಶರಣ ಸಾಹಿÂತ್ಯ ಪರಿಷತ್ತು, ಸೋಮೇಶ್ವರ ದೇವಾಲಯದ ಸಮಿತಿ ಹಾಗು ಸೋಮೇಶ್ವರ ಯುವಕ ಸಂಘದ ಆಶ್ರಯದಲ್ಲಿ ಗೆಜ್ಜೆಹಣಕೋಡು ಗ್ರಾಮದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮದ ವಾರ್ಷಿಕ ಪೂàಜೆ ಮತ್ತು ಸಿದ್ದಗಂಗಾ ಶ್ರೀಗಳ 112ನೇ ಜಯಂತಿ ಹಾಗು ಗುರುವಂದನಾ ಕಾರ್ಯ ಕ್ರಮವನ್ನು ಉದ್ದೆಶಿಸಿ ಮಾತನಾಡಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ಅವರಲ್ಲಿ ಸಂಸ್ಕಾರ ಬೆಳೆಸಿದರೆ ಅದು ದೇಶದ ಭದ್ರ ಬುನಾದಿಯೆಂದು ತಿಳಿದು ಸಿದ್ದಾಗಂಗಾ ಶಿಕ್ಷಣ ಸಂಸ್ಥೆಗಳ ಮೂಲಕ ಬಡವರು, ದೀನ ದಲಿತರನ್ನದೆ ಶಿಕ್ಷಣ ನೀಡಿದ್ದರು. ಹಸಿದ ಹೊಟ್ಟೆಗೆ ಅನ್ನ, ಆಶ್ರಯ, ನೀಡುವ ಮೂಲಕ ಜೀವನವನ್ನ ಸೇವೆಗಾಗಿ ಮುಡಿಪಾಗಿಟ್ಟವರು ಸೇವೆಯನ್ನೇ ಸಂಪತ್ತೆಂದು ಭಾವಿಸಿ ಜಗತ್ತನ್ನು ಉದ್ದಾರ ಮಾಡಲು ಹೊರಟ ಮಹಾನ್‌ ಸಂತರು ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಮಾತನಾಡಿ ತಮ್ಮ ಬದುಕನ್ನು ಸಾರ್ವತ್ರಿಕವಾಗಿರಿಸಿಕೊಂಡು ಮಕ್ಕಳಿಗೆ,ಶಿಕ್ಷಣ, ಆಶ್ರಯ, ದಾಸೋಹ ನೀಡಿ ಅವರಲ್ಲಿ ಆತ್ಮ ಸ್ಥೆರ್ಯ ತುಂಬುವ ಮೂಲಕ ಬಡವರ ಬಗ್ಗೆ ಕಳಾಜಿ ತೋರಿದ ಮಹಾನುಭಾವರು ಎಂದರು.

ನಿವೃತ ಪ್ರಾಧ್ಯಾಪಕರಾದ ಧರ್ಮಪ್ಪ ಮಾತನಾಡಿ ಸ್ವಾಮೀಜಿ ಅವರು ಹುಟ್ಟಿದ ಏಪ್ರೀಲ್‌ 1 ಬ್ರಿಟಿಷರ ಹೇಳಿಕೆ ಯಂತೆ ಮೂರ್ಖರ ದಿನ ಆದರೆ ಭಾರತೀ ಯರಾದ ನಮಗೆ ಅದು ಸಂತರ ದಿನ, ದಾಸೋಹ ದಿನ ಮುಂದಿನ ದಿನಗಳಲ್ಲಿ ಅವರ ಪುಣ್ಯ ಸ್ಮರಣೆ ಮೂಲಕ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿ ಕೊಳ್ಳೋಣ ವೆಂದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್‌,ಮಹೇಶ್‌ ಅಧ್ಯಕ್ಷತೆ ವಹಿಸಿದ್ದರು ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ, ವೇದಾಂತಯ್ಯ, ಯುವಕ ಸಂಘದ ಅಧ್ಯಕ್ಷ ಪ್ರಕಾಶ್‌, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಖಜಾಂಜಿ ಡಿ.ಬಿ.ಸೋಮಪ್ಪ, ಜಯರಾಜ್‌, ದಯಾನಂದ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next