Advertisement
ಶೇಣಿ ರಂಗಜಂಗಮ ಟ್ರಸ್ಟ್ ಮತ್ತು ಯಕ್ಷಸ್ನೇಹಿ ಬಳಗ ಪೆರ್ಲ ಇದರ ಸಂಯುಕ್ತ ಸಾರಥ್ಯದಲ್ಲಿ ಇಲ್ಲಿನ ಶಿವಳ್ಳಿ ಸಂಪದ ಕಟ್ಟಡದಲ್ಲಿ ತಾಳಮದ್ದಳೆ ಸಮಾರೋಪ ಸಮಾ ರಂಭದಲ್ಲಿ ಉಭಯ ಸಾಧಕರ ಸಂಸ್ಮರಣೆ ನಡೆಯಿತು. ಸಮಾರಂಭವನ್ನು ಖ್ಯಾತ ವೈದ್ಯ, ಸಾಹಿತಿ ಡಾ| ಶ್ರೀನಿಧಿ ಸರಳಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಶೇಣಿ ಮತ್ತು ವೈ.ಡಿ. ನಾಯಕರ ಕುರಿತಾಗಿ ‘ಕಣಿಪುರ’ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಸಂಸ್ಮರಣ ಭಾಷಣ ಮಾಡಿ ಶೇಣಿ ಮತ್ತು ವೈ.ಡಿ. ನಾಯಕರು ನಮ್ಮ ನೆಲದ ಸಾಂಸ್ಕೃತಿಕ ಆಸ್ತಿ. ಅವರ ಮೆಲುಕಿನಿಂದ ಉತ್ತೇಜಿತರಾಗಿ ಪರಂಪರೆಯನ್ನು ಕೈದಾಟಿಸುವ ಕೆಲಸ ನಮ್ಮದಾಗಬೇಕು. ಶೇಣಿಯವರು ಬೌದ್ಧಿಕವಾಗಿ ಕಲೆಯನ್ನೂ ಪ್ರೇಕ್ಷಕರನ್ನೂ ಎತ್ತರಿಸಿದರೆ, ವೈ.ಡಿ. ನಾಯಕರು ಸಂಘಟನಾ ಸಾಮರ್ಥ್ಯದಿಂದ ಗಡಿನಾಡಿನ ಜನತೆಗೆ ತೆಂಕು-ಬಡಗಿನ ಅತಿಸಮರ್ಥ ಕಲಾವಿದರ ಪ್ರಸ್ತುತಿಯ ದರ್ಶನ ಇತ್ತವರು. ಇವರಿಬ್ಬರಿಂದಾಗಿ ಕಲೆ, ಅಭಿರುಚಿ, ಬೌದ್ಧಿಕತೆ ಈ ನೆಲದಲ್ಲಿ ಬೆಳೆದಿದೆ. ಅದನ್ನು ಮರೆತರೆ ಇತಿಹಾಸ ಕ್ಷಮಿಸದು ಎಂದು ಹೇಳಿದರು.
Related Articles
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಪುಣಿಂಚತ್ತಾಯ, ಗೋವಿಂದ ಭಟ್ ಬೇಂದ್ರೋಡು, ಮನೋಹರ ಬಲ್ಲಾಳ್ ಅಡ್ವಳ ಹಾಗೂ ಚೆಂಡೆ, ಮದ್ದಳೆಯಲ್ಲಿ ಸುಧೀಶ್ ಪಾಣಾಜೆ, ನಾರಾಯಣ ಶರ್ಮ, ಸಮƒದ್ಧ ಪುಣಿಂಚತ್ತಾಯ ಪಾಲ್ಗೊಂಡರು.
Advertisement
ತಾಳಮದ್ದಳೆ ಸಂವಾದತಾಳಮದ್ದಳೆಯ ಪ್ರಸ್ತುತಿಯ ಗುಣಮಟ್ಟವನ್ನು ಪ್ರೇಕ್ಷಕ ಮತ್ತು ಕಲಾವಿದರ ಸಮ್ಮುಖದಲ್ಲಿಯೇ ಅವಲೋಕನಗೆ„ಯುವ ಈ ಹಿಂದೆ ತಾಳಮದ್ದಳೆ ಗಳಲ್ಲಿದ್ದ ಸಂವಾದ ಪರಂಪರೆಯನ್ನು ಬದಿಯಡ್ಕದಲ್ಲಿ ಮತ್ತೆ ಆರಂಭಿಸಲಾಯಿತು. ತಾಳಮದ್ದಳೆಗಳು ಸೊರಗುವುದನ್ನು ತಪ್ಪಿಸಿ, ಪ್ರೇಕ್ಷಕರನ್ನು ಮತ್ತು ಕಲಾವಿದರನ್ನು ರೂಪಿಸಲು ಆರೋಗ್ಯಪೂರ್ಣ ವಿಮರ್ಶೆಗಳ ಸಂವಾದ ತಾಳಮದ್ದಳೆಗಳಿಗೆ ಅಗತ್ಯವಾಗಿದೆ. ಈ ಪ್ರಯೋಗವನ್ನು ಪ್ರೇಕ್ಷಕರು ಪ್ರಶಂಸಿಸಿ ಅಭಿಪ್ರಾಯ ಪ್ರಕಟಿಸಿದರು. ತಾಳಮದ್ದಳೆ ಮುಗಿದ ಬಳಿಕ ಇಡೀ ಪ್ರದರ್ಶನವನ್ನು ವೀಕ್ಷಿಸಿದ ಪ್ರೇಕ್ಷಕರು ಮುಕ್ತವಾಗಿ ಕಲಾವಿದರನ್ನು ಪ್ರಶ್ನಿಸುವುದು, ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಮತ್ತು ಅವಲೋಕನ ನಡೆಸುವುದು ಸಂವಾದದ ಉದ್ದೇಶವಾಗಿದೆ.