Advertisement

ಅತ್ಯಾಧುನಿಕ ವಿನ್ಯಾಸ; ಟಾಟಾದ ಡಾರ್ಕ್‌ ರೇಂಜ್‌ ರಿಲೀಸ್‌

04:04 PM Jul 09, 2021 | Team Udayavani |

ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಟಾಟಾ ಮೋಟರ್ಸ್‌ ಬುಧವಾರ ಡಾರ್ಕ್‌ ರೇಂಜ್‌ನ ವಾಹನಗಳನ್ನು ಬಿಡುಗಡೆ ಮಾಡಿದೆ. ಆಲ್ಟ್ರೋಜ್, ನೆಕ್ಸಾನ್‌, ನೆಕ್ಸಾನ್‌ ಇ.ವಿ., ಹ್ಯಾರಿಯರ್‌ ವಾಹನಗಳು ಈ ಶ್ರೇಣಿಯಲ್ಲಿ ಲಭ್ಯವಾಗಲಿವೆ. ಆಲ್ಟ್ರೋಜ್ ಡಾರ್ಕ್‌ಗೆ 8.71
ಲಕ್ಷ ರೂ.ಗಳಿಂದ ದರ ಶ್ರೇಣಿ ಶುರುವಾಗಲಿದೆ.

Advertisement

ಇದನ್ನೂ ಓದಿ:ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ 4 ಸಚಿವ ಸ್ಥಾನ : ಪ್ರಧಾನಿಯವರಿಗೆ ರಾಜ್ಯ ಬಿಜೆಪಿ ಅಭಿನಂದನೆ

ನೆಕ್ಸಾನ್‌ಗೆ 10.41 ಲಕ್ಷ ರೂ., ನೆಕ್ಸಾನ್‌ ಇ.ವಿಗೆ. 15.99 ಲಕ್ಷ ರೂ., ಹ್ಯಾರಿಯರ್‌ ಡಾರ್ಕ್‌ಗೆ 18.04 ಲಕ್ಷ ರೂ. (ಎಕ್ಸ್‌-ಶೋರೂಮ್‌ ನವದೆಹಲಿ) ದರ ನಿಗದಿ ಪಡಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾದ ವಾಹನಗಳು ಹಲವು ಶ್ರೇಣಿಗಳಲ್ಲಿ ಲಭಿಸಲಿವೆ.

ಜತೆಗೆ ಹಲವಾರು ಅತ್ಯಾಧುನಿಕ ವಿನ್ಯಾಸಗಳು, ಫೀಚರ್‌ಗಳನ್ನು ಹೊಂದಿವೆ. ಹಬ್ಬರ ಋತುವಿನಲ್ಲಿ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಪ್ರಯತ್ನ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಶೇ.28ರಷ್ಟು ಲಾಭಗಳಿಸಿದ ಟಿಸಿಎಸ್‌
ದೇಶದ ಅತಿ ದೊಡ್ಡ ಸಾಫ್ಟ್ವೇರ್‌ ರಫ್ತುದಾರ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌), 2021-22ರ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕ ವರದಿಯನ್ನು (ಏಪ್ರಿಲ್‌ನಿಂದ ಜೂನ್‌ವರೆಗೆ) ಪ್ರಕಟಿಸಿದ್ದು ಈ ಅವಧಿಯಲ್ಲಿ ಶೇ. 28.5ರಷ್ಟು ಲಾಭ ಮಾಡಿರು ವುದಾಗಿ ತಿಳಿಸಿದೆ.

Advertisement

ಈ ಅವಧಿಯಲ್ಲಿ ಕಂಪನಿಯು 9,008 ಕೋಟಿ ರೂ.ಗಳಷ್ಟು ಲಾಭ ಮಾಡಿದ್ದು, 2020-21ರ ಮೊದಲ ತ್ತೈಮಾಸಿಕದಲ್ಲಿ ಕಂಪನಿ, 7,008 ಕೋಟಿ ರೂ. ಲಾಭ ಮಾಡಿತ್ತೆಂದು ಹೇಳಿದೆ. ಕೋವಿಡ್ ನಿರ್ಬಂಧಗಳಿಂದಾಗಿ, ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು ಸಂಪೂರ್ಣವಾಗಿ ಡಿಜಿಟಲ್‌ ತಂತ್ರಜ್ಞಾನ ಮೊರೆಹೋದ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಸಾಫ್ಟ್ವೇರ್‌ಗಳ ಉತ್ಪಾದನೆಗೆ ಅವಕಾಶ ಸಿಕ್ಕಿದ್ದು ಲಾಭ ಏರಿಕೆಗೆ ಕಾರಣ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next