ಹಾವೇರಿ: ಸರ್ವಜ್ಞನ ಜನ್ಮಸ್ಥಳ ಹಾಗೂ ಐತಿಹಾಸಿಕ ದೇವಸ್ಥಾನಗಳ ಸಂರಕ್ಷಣೆಗೆ ಇನ್ನು 15 ದಿನದೊಳಗೆ ಇಲಾಖೆಯಿಂದ 2.75 ಕೋಟಿ ರೂ. ಅನುದಾನ ಮಂಜೂರು ಮಾಡಿಸುವುದಾಗಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ಹಿರೇಕೆರೂರು ತಾಲೂಕು ಅಬಲೂರು ಗ್ರಾಮದ ಸೋಮೇಶ್ವರ ದೇವಸ್ಥಾನ ಸಂರಕ್ಷಣೆ ಸೇರಿ ಇತರೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸೋಮೇಶ್ವರ ದೇವಸ್ಥಾನ ಅಭಿವೃದ್ಧಿಗೆ ಎರಡು ಕೋಟಿ ರೂ., ಬಸವೇಶ್ವರ ದೇವಸ್ಥಾನ ಸಂರಕ್ಷಣೆಗೆ 75 ಲಕ್ಷ ರೂ. ಸೇರಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಲಾಗುವುದು. ಇದಲ್ಲದೇ ಪ್ರವಾಸಿ ತಾಣವಾಗಿ ಅಬಲೂರು, ಮದಗ ಮಾಸೂರು ಅಭಿವೃದ್ಧಿಪಡಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಇದನ್ನೂ ಓದಿ:ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ
ನಾನು ರಾಜಕೀಯಕ್ಕೆ ಬರುವ ಮುನ್ನವೇ ಪುನೀತ್ ರಾಜಕುಮಾರ್ ಅವರು ಪರಿಚಿತರಾಗಿದ್ದರು. 2000ನೇ ಇಸ್ವಿಯಿಂದಲೇ ನಮ್ಮಿಬ್ಬರ ಸ್ನೇಹವಿತ್ತು. ಪುನೀತ್ ಒಬ್ಬ ಸೇವಾ ಮನೋಭಾವವಿದ್ದ ವ್ಯಕ್ತಿ. ಅವರಲ್ಲಿದ್ದ ವಿಚಾರಗಳು ಯಾರಿಗೂ ಬರೋದಿಲ್ಲ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂಬುದು ನಮ್ಮ ಆಶಾಭಾವ ಎಂದು ಹೇಳಿದರು.
ಬಿಟ್ ಕಾಯಿನ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಗಂದ್ರೆ ಏನು ಅನ್ನೋದೇ ನನಗೂ ಗೊತ್ತಿರಲಿಲ್ಲ. ಮೊನ್ನೆಯಷ್ಟೇ ಈ ಬಗ್ಗೆ ಗೊತ್ತಾಯಿತು. ಅದು ಅಕ್ರಮ ಅಂತಾ ಹೇಳುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹೇಳಿದರು.