Advertisement
ರಾಜ್ಯದಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಟ್ಟಣದಲ್ಲಿ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬಸ್ ನಿಲ್ದಾಣ ನಿರ್ಮಾಣಕ್ಕೆ 22 ಕೋಟಿ ರೂ. ಅಂದಾಜಿನಲ್ಲಿ 3 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಿಸುವಲ್ಲಿ ಕ್ಷೇತ್ರದ ಶಾಸಕ ಎಸ್.ಜಯಣ್ಣ ಮುಂದಾಗಿದ್ದನ್ನು ಸ್ಮರಿಸಬಹುದು.
Related Articles
Advertisement
ಬರದ ಸಿದ್ಧತೆ: ದೇವಾಲಯ ಮತ್ತು ಪ್ರವಾಸಿ ತಾಣಗಳ ಬಿಡಾಗಿರುವ ತಾಲೂಕು ಕೇಂದ್ರದಲ್ಲಿ ರಸ್ತೆ ಸಾರಿಗೆ ಇಲಾಖೆ ಬಸ್ ನಿಲ್ದಾಣ ನಿರ್ಮಾಣ ಮಾಡಿ ಪ್ರಯಾಣಿಕರಿಗೆ ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಲು ಬಸ್ ನಿಲ್ದಾಣದ ಮೊದಲನೇ ಅಂತಸ್ತಿನ ಕಾಮಗಾರಿ ಎರಡು ತಿಂಗಳ ಒಳಗಾಗಿ ಪೂರ್ಣಗೊಳ್ಳಲು ಕಾಮಗಾರಿ ಬರದ ಸಿದ್ಧತೆ ಕಾರ್ಯ ನಡೆಯುತ್ತಿದೆ.
ತಾತ್ಕಾಲಿಕ ಬಸ್ ನಿಲ್ದಾಣ: ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಆರಂಭಗೊಂಡ ಬಳಿಕ ಪ್ರಯಾಣಿಕರಿಗೆ ಬೇರೆಡೆಗೆ ತೆರಳಲು ಅವಕಾಶ ಕಲ್ಪಿಸುವ ಸಲುವಾಗಿ ನಗರಸಭಾ ವತಿಯಿಂದ ಹೊಸ ಅಣಗಳ್ಳಿ ಬಡಾವಣೆಯ ಸಮೀಪ ಇರುವ ಖಾಸಗಿ ಜಮೀನೊಂದರಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ್ದು, ನಿಲ್ದಾಣದಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಅದನ್ನು ನಿವಾರಣೆ ಮಾಡಲು ಪ್ರಥಮ ಅಂತಸ್ತು ನಿಲ್ದಾಣವನ್ನು ಪ್ರಯಾಣಿಕ ರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿ ಗಳು ಪ್ರಯತ್ನಿಸುತ್ತಿದ್ದಾರೆ.
ಮೊದಲನೆ ಅಂತಸ್ತು: ನಿಲ್ದಾಣದ ಮೊದಲನೆ ಅಂತಸ್ತು ಕಾಮಗಾರಿ ಎರಡು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಕಾಮಗಾರಿಯನ್ನು ಚುರುಕುಗೊಳಿಸಿದ್ದು, ಶೀಘ್ರದಲ್ಲಿ ಸಿದ್ಧವಾಗಲಿದೆ ಎಂದು ಅಪೂರ್ವ ಕನ್ಸ್‌ಸ್ಟ್ರಕ್ಷನ್ ಪ್ರಾಜೆಕ್ಟ್ ವ್ಯವಸ್ಥಾಪಕ ವಿನೋದ್ ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
● ಡಿ.ನಟರಾಜು