Advertisement

ಪ್ರಯಾಣಿಕರ ಸಮಸ್ಯೆ ಶೀಘ್ರ ಪರಿಹರಿಸಿ: ಜೊಲ್ಲೆ

10:08 AM Jun 15, 2019 | Suhan S |

ಚಿಕ್ಕೋಡಿ: ಉಭಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ನಿಪ್ಪಾಣಿ ಕೇಂದ್ರ ಬಸ್‌ ನಿಲ್ದಾಣದಲ್ಲಿರುವ ಎಲ್ಲ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಿಪ್ಪಾಣಿ ಸಾರಿಗೆ ಘಟಕದ ಅಧಿಕಾರಿಗಳಿಗೆ ಶಾಸಕಿ ಶಶಿಕಲಾ ಜೊಲ್ಲೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ನಿಪ್ಪಾಣಿ ಕೇಂದ್ರ ಬಸ್‌ ನಿಲ್ದಾಣಕ್ಕೆ ಹಠಾತ್‌ ಭೇಟಿ ನೀಡಿದ ಅವರು, ನಿಲ್ದಾಣದಲ್ಲಿನ ಪ್ರಯಾಣಿಕರ ಸಮಸ್ಯೆಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ದಿನನಿತ್ಯ ಶಾಲೆಗಳಿಗೆ ತೆರಳಲು ಬಸ್‌ ಪ್ರಯಾಣ ದರ ನೀಡಿ ಪ್ರಯಾಣಿಸುವ ಸಮಸ್ಯೆಯನ್ನು ಆಲಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯಿಂದ ನೀಡುವ ಗುರುತಿನ ಚೀಟಿಯನ್ನು ಆಧರಿಸಿ ಬಸ್‌ನ ನಿರ್ವಾಹಕರು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಬೇಕು.

ನಿಪ್ಪಾಣಿಯ ಗ್ರಾಮೀಣ ಭಾಗಗಳಿಗೆ ಸುವ್ಯವಸ್ಥಿತ ಸಾರಿಗೆ ಸಂಚಾರ, ಬಸ್‌ ನಿಲ್ದಾಣದ ಅಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ, ಮಲಿನ ಸ್ವಚ್ಛತಾ ಗೃಹದ ನಿರ್ವಹಣೆ, ತಾಯಿ ಮಕ್ಕಳ ವಿಶ್ರಾಂತಿ ಗೃಹದ ಅನೈರ್ಮಲ್ಯ ಸೇರಿದಂತೆ ಜತ್ರಾಟ್ ಬಸ್‌ ಹತ್ತಿ ಪ್ರಯಾಣಿಕರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಾರಿಗೆ ಸಂಚಾರದಲ್ಲಾಗುವ ವಿವಿಧ ತೊಂದರೆಗಳತ್ತ ಗಮನ ಹರಿಸಿ ಸಾರಿಗೆ ಘಟಕದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರದಲ್ಲಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರಿಯಾದ ಯೋಜನೆಗಳನ್ನು ರೂಪಿಸಿ ಮುಂದಿನ ಎರಡು ದಿನಗಳಲ್ಲಿ ನಿಲ್ದಾಣದ ಸ‌್ವಚ್ಛತೆ, ಪೋಲಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗಳನ್ನು ಸರಿ ಮಾಡುವಂತೆ ಸಾರಿಗೆ ಘಟಕದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದರೊಂದಿಗೆ ಇನ್ನು ಮುಂದೆ ಕೇಂದ್ರ ಬಸ್‌ ನಿಲ್ದಾಣದಲ್ಲಿ ಯಾವುದೇ ರೀತಿಯ ಕೊರತೆಗಳು ಹಾಗೂ ಸಮಸ್ಯೆಗಳು ಎದುರಾಗದಂತೆ ನಿಗಾ ವಹಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಾರಿಗೆ ಘಟಕದ ಅಧಿಕಾರಿಗಳಾದ ಪಿ.ಜಿ. ಸನದಿ, ಎನ್‌.ಬಿ. ಬಿರಾದಾರ, ನಿಪ್ಪಾಣಿ ನಗರಸಭೆಯ ನಗರ ಸೇವಕರಾದ ಜಯವಂತ ಭಾಟಲೆ, ರಾಜು ಗುಂದೇಶಾ, ಸಂತೋಷ ಸಾಂಗಾವಕರ, ವಿನಾಯಕ ವಡೆ, ಸದ್ದಾಂ ನಾಗಾರ್ಜಿ, ಆಕಾಶ ಶೆಟ್ಟಿ, ಸೂರಜ್‌ ಖವರೆ, ನಗರಸೇವಕಿಯರಾದ ನೀತಾ ಬಾಗಡಿ, ದೀಪಕ ಮಾನೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next