Advertisement
ದೇಶದ ವಿಮಾ ಕಂಪನಿಗಳಿಗೆ ಜೀವವಿಮೆ ಪಾಲಿಸಿಗಳ ಜೊತೆಗೆ “ಕ್ಷೇಮಾಭಿವೃದ್ಧಿ ಕಾರ್ಯಕ್ರಮ’ಗಳ ಆಯೋಜನೆಗೆ ಅನುಮತಿ ನೀಡಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ಮುಂದಾಗಿದೆ.
ವಿಮಾದಾರ ವ್ಯಕ್ತಿಯು ಆರೋಗ್ಯಕರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿದ್ದರೆ, ಆತನಿಗೆ ಪ್ರೀಮಿಯಂ ನವೀಕರಣದ ವೇಳೆ ವಿಮಾ ಕಂಪನಿಯು ರಿಯಾಯಿತಿ ಘೋಷಿಸಬಹುದು. ಉದಾಹರಣೆಗೆ, ವಾರಕ್ಕೆ ಎಷ್ಟು ಹೆಜ್ಜೆ ನಡೆದಿದ್ದಾನೆ ಎಂಬ ಮಾಹಿತಿ, ಯೋಗಾಭ್ಯಾಸ-ಕ್ಯಾಲೊರಿ ಲೆಕ್ಕ, ಆರೋಗ್ಯಕರ ಎದೆಬಡಿತದ ದರ ಇತ್ಯಾದಿ. ಇದಲ್ಲದೇ, ವಿಮಾ ಕಂಪನಿಗಳೇ ನಡೆಸುವ ಕ್ಷೇಮಾಭಿವೃದ್ಧಿ ಕಾರ್ಯಕ್ರಮದಲ್ಲೂ ಗ್ರಾಹಕರು ಹೆಸರು ನೋಂದಾಯಿಸಿಕೊಳ್ಳಬಹುದು. ಕ್ರಿಯಾಶೀಲರಾಗಿ ಹಾಗೂ ವೈದ್ಯಕೀಯವಾಗಿ ಫಿಟ್ ಆಗಿರಲು ಬೇಕಾದ ಚಟುವಟಿಕೆಗಳನ್ನು ರೂಢಿಸಿಕೊಳ್ಳಲು ಈ ವೆಲ್‌ನೆಸ್ ರಿವಾರ್ಡ್ ಪ್ರೋಗ್ರಾಂ(ಡಬ್ಲ್ಯೂಆರ್‌ಪಿ) ಉತ್ತೇಜನ ನೀಡುತ್ತದೆ. ನಂತರ, ಅವರಿಗೆ ರಿವಾರ್ಡ್ ಪಾಯಿಂಟ್ ನೀಡಲಿದೆ. ಅದರ ಆಧಾರದಲ್ಲಿ ಅವರು ರಿಯಾಯಿತಿ ಪಡೆಯಬಹುದಾಗಿದೆ.
Related Articles
Advertisement
ನಿಯಮಗಳೇನು?– ಯೋಗಕ್ಷೇಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪಾಲಿಸಿದಾರರ ಇಚ್ಛೆಗೆ ಬಿಟ್ಟಿದ್ದು
– ಈ ಕಾರ್ಯಕ್ರಮವನ್ನು ವಿಮಾ ಕಂಪನಿಯೇ ನೇರವಾಗಿ ಅಥವಾ ಬೇರೆ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಬಹುದು
– ಈ ಕಾರ್ಯಕ್ರಮಗಳನ್ನು ಪಾಲಿಸಿಯಡಿ ಬರುವ ಹೆಚ್ಚುವರಿ ಸೇವೆಯಾಗಿ/ಆಯ್ಕೆಯಾಗಿ ಬಳಸಬೇಕು