Advertisement
ಮತ್ತೂಂದು ಮಹತ್ವದ ಅಂಶ ವೆಂದರೆ, ಪಿಎಚ್.ಡಿ.ಗೆ ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ (ಎನ್‌ಇಟಿ) ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ ಜತೆಗೆ ಮತ್ತೂಂದು ಪ್ರವೇಶ ಪರೀಕ್ಷೆಯೂ ನಡೆಯಲಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಶೇ. 60 ಸೀಟು ಮೀಸಲು. ಉಳಿದ ಶೇ. 40ನ್ನು ಆಯಾ ವಿ.ವಿ. ವ್ಯಾಪ್ತಿಯಲ್ಲಿ ಭರ್ತಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.
Related Articles
Advertisement
ಹೊಸ ವ್ಯವಸ್ಥೆಯಲ್ಲಿ ಪದವಿ ಶಿಕ್ಷಣ ನಾಲ್ಕು ವರ್ಷ ಇರಲಿದೆ. ಏಳನೇ ಸೆಮಿಸ್ಟರ್‌ನಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪ್ರಧಾನ ಅಧ್ಯಯನ ವಿಷಯವಾಗಿ ಆಯ್ಕೆ ಮಾಡಿಕೊಂಡ ವಿಚಾರಗಳಿಗೆ ಪೂರಕವಾಗಿ ಸಂಶೋಧನೆ ನಡೆಸಬೇಕಾಗುತ್ತದೆ. ಎಂಟನೇ ಸೆಮಿಸ್ಟರ್‌ನಲ್ಲಿ ಸಂಶೋಧನಾತ್ಮಕ ಅಧ್ಯಯನಕ್ಕೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಕೊನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನರ್ಸ್ ಪದವಿ ನೀಡಲಾಗುತ್ತದೆ. 7.5 ಸಿಜಿಪಿಎ ಆ್ಯವರೇಜ್ ಅಂಕಗಳಿದ್ದರೆ, ಪಿಎಚ್.ಡಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಮೊದಲ ಮೂರು ಸೆಮಿಸ್ಟರ್‌ಗಳಲ್ಲಿ ವಿಜ್ಞಾನ, ಮಾನವಿಕ ವಿಷಯಗಳು ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ಪರಿಚಯಾತ್ಮಕ ಮತ್ತು ಆರಂಭಿಕ ಅಧ್ಯಯನಗಳು ಇರಲಿವೆ. ಜತೆಗೆ ಇಂಗ್ಲಿಷ್, ಕನ್ನಡ ಮತ್ತು “ಭಾರತವನ್ನು ಅರಿತುಕೊಳ್ಳುವಿಕೆ’ ಪರಿಸರ ವಿಜ್ಞಾನ, ಆರೋಗ್ಯ ಮತ್ತು ಕ್ಷೇಮಪಾಲನೆ ಅಥವಾ ಯೋಗ ಮತ್ತು ಕ್ರೀಡೆಗಳು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಬಿಗ್ ಡೇಟಾ ಅನಾಲಿಸಿಸ್‌ಗಳನ್ನೂ ಕಲಿಯಬೇಕಾಗುತ್ತದೆ.
ನಾಲ್ಕನೇ ವರ್ಷದಲ್ಲಿ ಅಂತಿಮ ಅಥವಾ 4ನೇ ವರ್ಷದಲ್ಲಿ ಪ್ರಧಾನ ಆಯ್ಕೆಯ ವಿಷಯದ ಅಧ್ಯಯನ. ವಿದ್ಯಾರ್ಥಿಗಳು ಎರಡು ಪ್ರಧಾನ ವಿಷಯಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಬಹುದು. ಜತೆಗೆ 2 ವಿಭಿನ್ನ ವಿಷಯಗಳನ್ನು “ಮೈನರ್ ಸಬೆjಕ್ಟ್’ ಆಗಿ ಕಲಿಯಬಹುದು. ಉದಾಹರಣೆಗೆ ವಿಜ್ಞಾನ ವಿಷಯ ತೆಗೆದುಕೊಂಡ ವಿದ್ಯಾರ್ಥಿಗೆ ಮಾನವಿಕ ಅಥವಾ ಸಾಮಾಜಿಕ ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಬಹುದು.
ಹೊಸ ನಿಯಮ ಏನು? :
- ಸಂಶೋಧನೆಯ ಆಯ್ಕೆಯ ವಿಷಯ ಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
- ಸಾಮಾಜಿಕವಾಗಿ, ಸ್ಥಳೀಯವಾಗಿ ಅಗತ್ಯವಿರುವ, ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಮಹತ್ವ ಪಡೆದಿರುವ ಮತ್ತು ಅದರಿಂದ ಸಮಾಜಕ್ಕೆ ಹೆಚ್ಚು ಮೌಲ್ಯ ನೀಡುವ ವಿಷಯಗಳನ್ನು ಆಯ್ಕೆ ಮಾಡಿದರೆ ಪ್ರೋತ್ಸಾಹ ನೀಡ ಲಾಗುತ್ತದೆ.
- ಸಂಶೋಧನಾ ವಿದ್ಯಾರ್ಥಿ ಮತ್ತು ಗೈಡ್ ಉತ್ತಮ ಕಲಿಕಾ ಬಾಂಧವ್ಯ ಕಲ್ಪಿಸಲು ಪರಸ್ಪರ ಒಪ್ಪಂದಕ್ಕೆ ಬರಲೂ ಅವಕಾಶ ಕಲ್ಪಿಸ ಲಾಗಿದೆ.
- ಸಂಶೋಧನಾ ವಿದ್ಯಾರ್ಥಿಗೆ ಹೆಚ್ಚು ಅನುಕೂಲವಾಗುವಂತೆ ಗೈಡ್ ಕೋರ್ಸ್‌ನಲ್ಲಿ ಹೆಚ್ಚಿನ ರೀತಿಯ ಮಾರ್ಗದರ್ಶನಗಳನ್ನೂ ನೀಡಬೇಕು.